ದೇಶ

ತಮಿಳುನಾಡು: ತೈಲ ಬೆಲೆ ಗಗನಕ್ಕೆ; ಆದರೆ ಇಲ್ಲಿ ಮಾತ್ರ ಪೆಟ್ರೋಲ್, ಡೀಸೆಲ್ ಉಚಿತ; ಷರತ್ತುಗಳು ಅನ್ವಯ!

ತೈಲೋತ್ಪನ್ನಗಳ ದರಗಳು ಗಗನಕ್ಕೇರಿರುವಂತೆಯೇ ತಮಿಳುನಾಡಿನಲ್ಲಿ ಉಚಿತವಾಗಿ ಪೆಟ್ರೋಲ್ ಮತ್ತು ಡೀಸೆಲ್ ನೀಡಲಾಗುತ್ತಿದೆ.

ತಮಿಳುನಾಡು: ತೈಲ ಬೆಲೆ ಗಗನಕ್ಕೆ; ಆದರೆ ಇಲ್ಲಿ ಮಾತ್ರ ಪೆಟ್ರೋಲ್, ಡೀಸೆಲ್ ಉಚಿತ; ಷರತ್ತುಗಳು ಅನ್ವಯ!
ಸಂಗ್ರಹ ಚಿತ್ರ
Published On :
ಚೆನ್ನೈ: ತೈಲೋತ್ಪನ್ನಗಳ ದರಗಳು ಗಗನಕ್ಕೇರಿರುವಂತೆಯೇ ತಮಿಳುನಾಡಿನಲ್ಲಿ ಉಚಿತವಾಗಿ ಪೆಟ್ರೋಲ್ ಮತ್ತು ಡೀಸೆಲ್ ನೀಡಲಾಗುತ್ತಿದೆ.
ಹೌದು.. ಕೃಷ್ಣಗಿರಿಯ ರಾಯಕೊಟ್ಟೈ ರಸ್ತೆಯಲ್ಲಿನ ಎಚ್‌ಪಿ ಪೆಟ್ರೋಲ್ ಪಂಪ್‌ನಲ್ಲಿ ಈ ವಿಶೇಷ ಕೊಡುಗೆ ನೀಡಲಾಗುತ್ತಿದೆ. ಆದರೆ ಇದು ತಮಿಳುನಾಡಿನ ಅಮ್ಮಾ ಯೋಜನೆಯ ಮುಂದುವರಿದ ಭಾಗವೇನೂ ಅಲ್ಲ. ನಗದು ರಹಿತ ವಹಿವಾಟು ಉತ್ತೇಜನಕ್ಕಾಗಿ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆ ಈ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.
ತೈಲ ಬೆಲೆ ಏರಿಕೆಯಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದರೆ ತಮಿಳುನಾಡಿನ ಕೃಷ್ಣಗಿರಿಯ ಹಿಂದೂಸ್ತಾನ್ ಪೆಟ್ರೋಲಿಯಂ ಬಂಕ್ ಗ್ರಾಹಕರಿಗೆ ಉಚಿತವಾಗಿ 1 ಲೀ. ಪೆಟ್ರೋಲ್ ಅಥವಾ ಡೀಸೆಲ್ ನೀಡುತ್ತಿದೆ. ಆದರೆ ಇದಕ್ಕೆ ಕೆಲ ಷರತ್ತುಗಳಿವೆ. ಉಚಿತ ಪೆಟ್ರೋಲ್ ಮತ್ತು ಡೀಸೆಲ್ ಪಡೆಯಲು ಗ್ರಾಹಕರು ಪೆಟ್ರೋಲ್ ಪಂಪ್ ನವರ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ. ಜತೆಗೆ ಹಿಂದೂಸ್ತಾನ್ ಪೆಟ್ರೋಲಿಯಂ ಲಿ. ಕೂಡ ಜನರು ನಗದುರಹಿತ ವಹಿವಾಟು ನಡೆಸುವಂತೆ ಪ್ರೇರೇಪಿಸಲು ಈ ಆ್ಯಪ್ ಗೆ ಬೆಂಬಲ ನೀಡಿದೆ. 
ಆ್ಯಪ್ ಮೂಲಕ ಬಳಕೆದಾರರು ಖರೀದಿಸುವ ಪ್ರತಿ 5 ಲೀ. ಪೆಟ್ರೋಲ್ ಅಥವಾ ಡೀಸೆಲ್ ಜತೆಗೆ 1 ಲೀ. ಪೆಟ್ರೋಲ್ ಅಥವಾ ಡೀಸೆಲ್ ಉಚಿತವಾಗಿ ನೀಡಲಾಗುತ್ತದೆ. ಈ ಕೊಡುಗೆ ಎರಡು ತಿಂಗಳವರೆಗೆ ಚಾಲ್ತಿಯಲ್ಲಿರಲಿದೆ. ತೈಲ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಇಲ್ಲಿನ ಉಚಿತ ಇಂಧನ ಕೊಡುಗೆ ಖುಷಿ ಕೊಟ್ಟಿದ್ದು, ನೂರಾರು ಸಂಖ್ಯೆಯಲ್ಲಿ ಜನರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಉಚಿತ ಕೊಡುಗೆಯ ಪ್ರಯೋಜನ ಪಡೆಯುತ್ತಿದ್ದಾರೆ. ಅಂತೆಯೇ ನಿತ್ಯ ಪೆಟ್ರೋಲ್ ಬಂಕ್ ಬಳಿ ನೂರಾರು ಮಂದಿ ಲೈನ್ ನಲ್ಲಿ ನಿಂತು ಇಂಧನ ತುಂಬಿಸಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.