ಯುಪಿಎಸ್'ಸಿ ವೆಬ್'ಸೈಟ್ ಹ್ಯಾಕ್; ಜಪಾನೀ ಕಾರ್ಟೂನ್ ಡೋರೇಮಾನ್ ಚಿತ್ರ ಹಾಕಿದ ದುಷ್ಕರ್ಮಿಗಳು
ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್'ಸಿ) ವೆಬ್'ಸೈಟನ್ನು ದುಷ್ಕರ್ಮಿಗಳ ತಂಡವೊಂದು ಸೋಮವಾರ ರಾತ್ರಿ ಹ್ಯಾಕ್ ಮಾಡಿದೆ...

Published On :
ನವದೆಹಲಿ: ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್'ಸಿ) ವೆಬ್'ಸೈಟನ್ನು ದುಷ್ಕರ್ಮಿಗಳ ತಂಡವೊಂದು ಸೋಮವಾರ ರಾತ್ರಿ ಹ್ಯಾಕ್ ಮಾಡಿದೆ.
ಯುಪಿಎಸ್'ಸಿ ವೆಬ್'ಸೈಟ್ ಹ್ಯಾಕ್ ಮಾಡಿರುವ ದುಷ್ಕರ್ಮಿಗಳು, ವೆಬ್'ಸೈಟ್ ಮುಖಪುಟದಲ್ಲಿ ಜನಪ್ರಿಯ ಜಪಾನೀ ಕಾರ್ಟೂನ್ ಡೋರೇಮಾನ್ ಚಿತ್ರವನ್ನು ಹಾಕಿದ್ದಾರೆ. ಇದಲ್ಲದೆ ಡೋರೇಮಾನ್ ಚಿತ್ರದೊಂದಿಗೆ ಎರಡು ಸಾಲನ್ನು ಬರೆಯಲಾಗಿದ್ದು, ಡೊರೇಮಾನ್ ಪಿಕಪ್ ದಿ ಕಾಲ್ ಮತ್ತು ಐ ಆ್ಯಮ್ ಸ್ಟುಪಿಡ್ ಎಂಬ ಸಾಲುಗಳು ಕಂಡು ಬಂದಿವೆ.
ಇಷ್ಟೇ ಅಲ್ಲದೆ, ಹಿಂದಿಯಲ್ಲಿ ಬರುವ ಡೋರೇಮಾನ್ ಟೈಟಲ್ ಸಾಂಗ್ ಹಿನ್ನಲೆಯಲ್ಲಿ ಪ್ಲೇ ಆಗುವಂತೆ ಮಾಡಲಾಗಿದೆ. ಹ್ಯಾಕ್ ಆಗಿರುವ ವೆಬ್'ಸೈಟ್'ನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡಿರುವ ಬಳಕೆದಾರರು ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.
ವೆಬ್'ಸೈಟ್ ಹ್ಯಾಕ್ ಆಗಿರುವ ವಿಚಾರ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಲು ಕೂಡಲೇ ಸೈಟನ್ನು ಪುನರ್ ಸ್ಥಾನೆ ಮಾಡಿದ್ದಾರೆ. ನಂತರದಲ್ಲಿ ವೆಬ್'ಸೈಟ್ ನಿರ್ವಹಣೆಯಲ್ಲಿದೆ ಎಂಬ ಬರಹದೊಂದಿಗೆ ವೆಬ್'ಸೈಟ್ ಕಾಣಸಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ವೆಬ್ ಸೈಟ್ ಹ್ಯಾಕ್website hackedUPSC websiteJapanese cartoonDoraemonಯುಪಿಎಸ್ ವೆಬ್\'ಸೈಟ್ಜಪಾನೀ ಕಾರ್ಟೂನ್ಡೋರೇಮಾನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


