ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣ: ಸೆ.18ರೊಳಗೆ ಇಡಿ ಗೆ ಉತ್ತರಿಸಲು ಕಾರ್ತಿಗೆ ಕೋರ್ಟ್ ತಾಕೀತು
ದೆಹಲಿಯ ಪಟಿಯಾಲಾ ಕೋರ್ಟ್ ಸೋಮವಾರ ಕಾರ್ತಿ ಚಿದಂಬರಂಗೆ ನೋಟಿಸ್ ಜಾರಿಗೊಳಿಸಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಮಧ್ಯಂತರ ಜಾಮೀನು ರದ್ದು....

Published On :
ನವದೆಹಲಿ: ದೆಹಲಿಯ ಪಟಿಯಾಲಾ ಕೋರ್ಟ್ ಸೋಮವಾರ ಕಾರ್ತಿ ಚಿದಂಬರಂಗೆ ನೋಟಿಸ್ ಜಾರಿಗೊಳಿಸಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಮಧ್ಯಂತರ ಜಾಮೀನು ರದ್ದು ಕೋರುವ ಅರ್ಜಿಗೆ ಸೆಪ್ಟೆಂಬರ್ 18 ರೊಳಗೆ ಉತ್ತರಿಸಬೇಕೆಂದು ಸೂಚಿಸಿದೆ.
ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ಕಾರಿ ಪಾಲುಗೊಂಡಿದ್ದರ ಸಂಬಂಧ ತನಿಖೆ ನಡೆಸುತ್ತಿರುವ ಇಡಿ ಕಾರ್ತಿ ಮಧ್ಯಂತರ ಜಾಮೀನು ಪಡೆದಿದ್ದು ಅವರು ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದೂ ಆರೋಪಿಸಿದೆ.ಕಾರ್ತಿ ಇಡಿ ವಿಚಾರಣೆ ವೇಳೆ ಕೆಲವೊಮ್ಮೆ "ಕಿರಿಕಿರಿ" ಮಾಡಿದ್ದರೆ ಇನ್ನೂ ಕೆಲವೊಮ್ಮೆ "ಕೋಪ" ಪ್ರದರ್ಶಿಸುತ್ತಾರೆ ಎಂದು ಸಂಸ್ಥೆ ಆರೋಪಿಸಿದೆ.
ಕಾರ್ತಿ ತಮ್ಮ ಪ್ರಶ್ನೆಗಳಿಗೆ "ಸಿದ್ದ ಮಾದರಿ ಉತ್ತರ" ಗಳನ್ನು ನಿಡುತ್ತಿದ್ದಾರೆ.ಎಂದಿರುವ ಇಡಿ ಕಾರ್ತಿ ಅವ್ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಅವಕಾಶ ಕಲ್ಪಿಸಲ್ಬೇಕೆಂದು ಕೋರಿದೆ.
ಏರ್ಟೆಲ್-ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಗೆ ಅಕ್ಟೋಬರ್ 8 ರವರೆಗೆ ದೆಹಲಿಯ ಪಾಟಿಯಾಲ ಹೌಸ್ ಕೋರ್ಟ್ ಬಂಧನದ ವಿರುದ್ಧ ಮಧ್ಯಂತರ ತಡೆ ನೀಡಿ ಆದೇಶಿಸಿದೆ.ಆಗಸ್ಟ್ 7ಕ್ಕೆ ಕೋರ್ಟ್ ಈ ಆದೇಶ ಹೊರಡಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


