ಜೈಲಿನಲ್ಲಿರುವ ಲಾಲೂ ಗೆ ಖಿನ್ನತೆ: ಮನೋ ವೈದ್ಯರ ಸಹಾಯ ಕೋರಲಿರುವ ರಿಮ್ಸ್ ಡಾಕ್ಟರ್
ಬಹುಕೋಟಿ ಮೇವು ಹಗರಣದ ಪ್ರಮುಖ ಅಪರಾಧಿ ಮಾಜಿ ಸಿಎಂ ಹಾಗೂ ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಖಿನ್ನತೆಯಿಂದು ಬಳಲುತ್ತಿದ್ದು ಅವರಿಗೆ .,..

Published On :
ರಾಂಚಿ: ಬಹುಕೋಟಿ ಮೇವು ಹಗರಣದ ಪ್ರಮುಖ ಅಪರಾಧಿ ಮಾಜಿ ಸಿಎಂ ಹಾಗೂ ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಖಿನ್ನತೆಯಿಂದು ಬಳಲುತ್ತಿದ್ದು ಅವರಿಗೆ ಮನೋವೈದ್ಯರ ಅವಶ್ಯಕತೆ ಇದೆ ಎಂದು ವೈದ್ಯರು ಹೇಳಿದ್ದಾರೆ.
ಲಾಲೂ ಪ್ರಸಾದ್ ಅವರ ಮಧುಮೇಹ ಪ್ರಮಾಣ ಹಾಗೂ ರಕ್ತದೊತ್ತಡದ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ರಿಮ್ಸ್ ಮುಖ್ಯಸ್ಥ ಆರ್ ಕೆ ಶ್ರೀವತ್ಸ ಹೇಳಿದ್ದಾರೆ, ಕಳೆದ ಶನಿವಾರದಿಂದ ಲಾಲೂ ಪ್ರಸಾಧ್ ಅಸಹಜವಾಗಿ ವರ್ತಿಸತ್ತಿದ್ದಾರೆ, ಅವರನ್ನು ಪರಿಶೀಲಿಸಿದಾಗ ಅವರು ಸಣ್ಣ ಪ್ರಮಾಣದ ಖಿನ್ನತೆಗೊಳಗಾಗಿರುವುದು ತಿಳಿದು ಬಂದಿದೆ ಎಂದು ವೈದ್ರು ತಿಳಿಸಿದ್ದಾರೆ,
ಅವರಿಗೆ ಕಾಲು ಊದಿಕೊಂಡಿದ್ದು, ಸರಿಯಾಗಿ ನಡೆಯಲು ಆಗುತ್ತಿಲ್ಲ, ಸದ್ಯ ಅವರನ್ನು ನೀಗದಲ್ಲಿರಿಸಲಾಗಿದ್ದು, ಮನೋವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುವುದು ಎಂದು ಹೇಳಿದ್ದಾರೆ,
ಲಾಲೂ ಪ್ರಸಾದ್ ಅವರ ಅನಾರೋಗ್ಯ ಸಂಬಂಧ ಎಲ್ಲಾ ವರದಿಗಳನ್ನು ಬಿಸ್ರಾ-ಮುಂಡಾ ಜೈಲಿನ ಮುಖ್ಯಸ್ಥರಿಗೆ ಕಳುಹಿಸಲಾಗಿದೆ. ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


