ಪಾಕಿಸ್ತಾನ ಭಯೋತ್ಪಾದನೆ ನಿಲ್ಲಿಸಿದರೇ ನಾವು ಕೂಡ ನೀರಜ್ ಚೋಪ್ರಾ ಆಗುತ್ತೇವೆ: ಬಿಪಿನ್ ರಾವತ್
ಒಂದು ವೇಳೆ ಪಾಕಿಸ್ತಾನ ತನ್ನ ಭಯೋತ್ಪಾದನೆ ನಿಲ್ಲಿಸಿದರೇ ಭಾರತೀಯ ಸೇನೆ ಕೂಡ ಜಾವಲಿನ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾರಂತೆ ಇರುತ್ತದೆ ಎಂದು ...

Published On :
ನವದೆಹಲಿ: ಒಂದು ವೇಳೆ ಪಾಕಿಸ್ತಾನ ತನ್ನ ಭಯೋತ್ಪಾದನೆ ನಿಲ್ಲಿಸಿದರೇ ಭಾರತೀಯ ಸೇನೆ ಕೂಡ ಜಾವಲಿನ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾರಂತೆ ಇರುತ್ತದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ,
ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದ್ದ ಸೇನೆ ಪದಕ ವಿಜೇತರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, 2017 ನೇ ವರ್ಷಕ್ಕೆ ಹೋಲಿಸಿದರೇ 2018 ರಲ್ಲಿ ಕಾಶ್ಮೀರದ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಿದ್ದಾರೆ.
ಮೊದಲು ಅವರೇ ಮುಂದಾಗಲಿ, ಮೊದಲು ಪಾಕಿಸ್ತಾನವೇ ಭಯೋತ್ಪಾದನೆ ನಿಲ್ಲಿಸಲಿ, ಅವರು ಉಗ್ರವಾದವನ್ನು ನಿಲ್ಲಿಸಿದರೇ ನಾವು ಕೂಡ ನೀರಜ್ ಛೋಪ್ರಾ ಆಗುತ್ತೇವೆ. ಕಂಚಿನ ಪದಕ ಗೆದ್ದಿ ಪಾಕಿಸ್ತಾನದ ಅರ್ಷದ್ನದೀಂ ಜೊತೆ ನೀರಜ್ ಚೋಪ್ರಾ ವೇದಿಕೆಯ ಮೇಲೆ ಕೈ ಕುಲುಕಿದ್ದರು. ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರಾ ವೇದಿಕೆ ಮೇಲ್ದೇದ ಚೀನಾ ಮತ್ತು ಪಾಕಿಸ್ತಾನ ಆಟಗಾರರ ಕೈ ಕುಲುಕಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


