ಮಧ್ಯಪ್ರದೇಶ: 7 ವರ್ಷದ ಪುತ್ರನ ಎದುರು ಮಗನಿಂದ ತಾಯಿಯ ಅತ್ಯಾಚಾರ
ಮಧ್ಯಪ್ರದೇಶ ರಾಜ್ಯದ ಬರ್ವಾನಿ ಜಿಲ್ಲೆಯ ಸುರಾನಿ ಎಂಬ ಹಳ್ಳಿಯಲ್ಲಿ 30 ವರ್ಷದ ಮಗನೊಬ್ಬ 45 ವರ್ಷದ ತನ್ನ ತಾಯಿಯ ಮೇಲೆಯೇ ಅತ್ಯಾಚಾರ ನಡೆಸಿರುವ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶ :ಮಧ್ಯಪ್ರದೇಶ ರಾಜ್ಯದ ಬರ್ವಾನಿ ಜಿಲ್ಲೆಯ ಸುರಾನಿ ಎಂಬ ಹಳ್ಳಿಯಲ್ಲಿ 30 ವರ್ಷದ ಮಗನೊಬ್ಬ 45 ವರ್ಷದ ತನ್ನ ತಾಯಿಯ ಮೇಲೆಯೇ ಅತ್ಯಾಚಾರ ನಡೆಸಿರುವ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಕಲಾಂಗ ಚೇತನ ಪತಿಯಿಂದ ದೂರವಾಗಿರುವ ತಾಯಿ ಮನೆಯಲ್ಲಿ ಮಲಗಿರುವಾಗ ಸೆಪ್ಟೆಂಬರ್ 2 ರಂದು ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದ ಆರೋಪಿ, ತನ್ನ ತಾಯಿಯನ್ನು ಬಲವಂತಾಗಿ ಒತ್ತಾಯಿಸಿದ್ದಾನೆ. ಆಕೆ ಪ್ರತಿರೋಧಿಸಿದಾಗ ಆಕೆಯ ಕುತ್ತಿಗೆ ಮೇಲೆ ಕುಡಗೋಲು ಹಾಕಿ ಅತ್ಯಾಚಾರ ಮಾಡಿದ್ದಾನೆ ಎಂದು ಸೆಂದ್ವಾ ಗ್ರಾಂ ಠಾಣೆ ಅಧಿಕಾರಿ ದಿನೇಶ್ ಚೌಹ್ಹಾಣ್ ಹೇಳಿದ್ದಾರೆ.
ಬಂಧಿತ ಆರೋಪಿ ಹೆಂಡತಿಯಿಂದ ದೂರವಾದ ನಂತರ ಎರಡು ವರ್ಷದಿಂದ ತನ್ನ ಕುಟುಂಬದವರೊಂದಿಗೆ ವಾಸಿಸುತ್ತಿದ್ದ. ಈ ಘಟನೆಯನ್ನು ಆತನ ಏಳು ವರ್ಷದ ಮಗನೇ ನೋಡಿದ್ದಾನೆ. ಆದರೆ , ಭಯದಿಂದ ಏನನ್ನೂ ಹೇಳುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

