ದೇಶ

ತಾಯಿ ಸೂಚನೆ ಮೇರೆಗೆ ಮಲ ಸಹೋದರಿ ಮೇಲೆ ಸಾಮೂಹಿಕ ಅತ್ಯಾಚಾರ, ಕಣ್ಣು ಕಿತ್ತು, ಆ್ಯಸಿಡ್ ಸುರಿದ ಕಾಮಾಂಧರು!

ಸಹೋದರನೇ ತನ್ನ ಮಲ ಸಹೋದರಿ ಮೇಲೆ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಗೈದು, ಆಕೆಯ ಕಣ್ಣು ಕಿತ್ತು ಹಾಕಿ, ದೇಹವನ್ನು ಆ್ಯಸಿಡ್ ನಿಂದ ಸುಟ್ಟು ಹಾಕಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ತಾಯಿ ಸೂಚನೆ ಮೇರೆಗೆ ಮಲ ಸಹೋದರಿ ಮೇಲೆ ಸಾಮೂಹಿಕ ಅತ್ಯಾಚಾರ, ಕಣ್ಣು ಕಿತ್ತು, ಆ್ಯಸಿಡ್ ಸುರಿದ ಕಾಮಾಂಧರು!
ಸಾಂದರ್ಭಿಕ ಚಿತ್ರ
Published On :
ಶ್ರೀನಗರ: ಕೌಟುಂಬಿಕ ವೈಷಮ್ಯದ ಹಿನ್ನಲೆಯಲ್ಲಿ ತಾಯಿ ಸೂಚನೆ ಮೇರೆಗೆ ಮಲ ಸಹೋದರನೇ ತನ್ನ ಮಲ ಸಹೋದರಿ ಮೇಲೆ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಗೈದು, ಆಕೆಯ ಕಣ್ಣು ಕಿತ್ತು ಹಾಕಿ, ದೇಹವನ್ನು ಆ್ಯಸಿಡ್ ನಿಂದ ಸುಟ್ಟು ಹಾಕಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಕಾಶ್ಮೀರದ ಬಾರಾಮುಲ್ಲಾದ ಉರಿಯಲ್ಲಿ ಈ ಘೋರ ದುಷ್ಕತ್ಯ ನಡೆದಿದ್ದು, ಖಾಸಗಿ ವಾಹಿನಿಯೊಂದು ವರದಿ ಮಾಡಿರುವಂತೆ ಕೌಟುಂಬಿಕ ವೈಷಮ್ಯದಿಂದಾಗಿ ಮಲ ತಾಯಿಯೇ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲ್ಲುವಂತೆ ತನ್ನ 14 ವರ್ಷದ ಮಗನಿಗೆ ಸೂಚನೆ ನೀಡಿ ಕೊಲೆ ಮಾಡಿಸಿದ್ದಾಳೆ ಎಂದು ಹೇಳಲಾಗಿದೆ.
ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯ ಹೊರ ವಲಯದ ಅರಣ್ಯ ಪ್ರದೇಶದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ 9 ವರ್ಷದ ಬಾಲಕಿ ಮೃತ ದೇಹ ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಕುಕೃತ್ಯಕ್ಕೆ ಕೌಟುಂಬಿಕ ವೈಷಮ್ಯವೇ ಕಾರಣ ಎಂದು ಶಂಕಿಸಿದ್ದಾರೆ. 
ಮಾನವ ಕುಲವೇ ತಲೆ ತಗ್ಗಿಸುವ ಘೋರ ಕೃತ್ಯಕ್ಕೆ ಕಾರಣವಾಯ್ತು ಕೌಟುಂಬಿಕ ವೈಷಮ್ಯ
ಕೌಟುಂಬಿಕ ವೈಷಮ್ಯದ ಹಿನ್ನಲೆಯಲ್ಲಿ ತಾಯಿ ಸೂಚನೆ ಮೇರೆಗೆ ಮಲ ಸಹೋದರನೇ ತನ್ನ ಮಲ ಸಹೋದರಿ ಮೇಲೆ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಗೈದು, ಆಕೆಯ ಕಣ್ಣು ಕಿತ್ತು ಹಾಕಿ, ದೇಹವನ್ನು ಆ್ಯಸಿಡ್ ನಿಂದ ಸುಟ್ಟು ಹಾಕಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ ಇಲ್ಲಿನ ಸ್ಥಳೀಯ ನಿವಾಸಿಯೊಬ್ಬರ ಹಿರಿಯ ಪತ್ನಿ ಈ ದುಷ್ಕತ್ಯ ಮಾಡಿಸಿದ್ದು, ಆಕೆಯ ಪತಿ ಬೇರೊಬ್ಬ ಮಹಿಳೆಯೊಂದಿಗೆ 2ನೇ ವಿವಾಹವಾಗಿದ್ದ. ಅಲ್ಲದೆ ಆಕೆಗೆ 9 ವರ್ಷದ ಹೆಣ್ಣು ಮಗು ಕೂಡ ಇತ್ತು. ಇಬ್ಬರ ನಡುವೆಯೂ ಆಗಾಗ ಕೌಟುಂಬಿಕ ಕಲಹ ಏರ್ಪಡುತ್ತಿತ್ತು. ಇದರಿಂದ ಕ್ರೋಧಗೊಂಡಿದ್ದ ಮೊದಲ ಪತ್ನಿ ತನ್ನ 14 ವರ್ಷದ ಮಗ ಮತ್ತು ಆತನ ಸ್ನೇಹಿರಿಗೆ ಸೂಚನೆ ನೀಡಿ, ತನ್ನ ಗಂಡನ 2ನೇ ಪತ್ನಿಯ ಮಗಳನ್ನು ಅತ್ಯಾಚಾರ ಗೈದು ಕೊಲೆ ಮಾಡುವಂತೆ ಹೇಳಿದ್ದಾಳೆ.
ತಾಯಿ ಆಜ್ಞೆ ಮೇರೆ 14 ವರ್ಷದ ಮಗ ತನ್ನ ಸ್ನೇಹಿತರೊಂದಿಗೆ ಸೇರಿ 9 ವರ್ಷದ ಬಾಲಕಿಯನ್ನು ಅಪಹರಿಸಿ ಉರಿಯ ಹೊರವಲಯದಲ್ಲಿರುವ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಅಲ್ಲಿ ತನ್ನ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಗೈದಿದ್ದಾನೆ. ಅಲ್ಲದೆ ಅತ್ಯಾಚಾರದ ಬಳಿಕ ಬಾಲಕಿಯ ಕಣ್ಣುಗಳನ್ನು ಕಿತ್ತು ಹಾಕಿ, ಆಕೆಯ ಮೇಲೆ ಆ್ಯಸಿಡ್ ಸುರಿದು ಜೀವಂತವಾಗಿ ಸುಟ್ಟು ಹಾಕಿ ದೇಹವನ್ನು ಅರಣ್ಯದೊಳಗೆ ಬಿಸಾಡಿ ಹೋಗಿದ್ದಾನೆ. ಇನ್ನೂ ಆಘಾತವೆಂದರೆ ಅತ್ಯಾಚಾರದ ವೇಳೆ ಬಾಲಕಿಯ ಮಲತಾಯಿ ಕೂಡ ಸ್ಥಳದಲ್ಲೇ ಇದ್ದರು ಎನ್ನಲಾಗಿದೆ. ಬಳಿಕ ಬಾಲಕಿ ತಲೆಗೆ ಕಬ್ಬಿಣದ ಕೊಡಲಿಯಿಂದ ಬಲವಾಗಿ ಹೊಡೆದು ಆಕೆಯನ್ನು ಕೊಲೆಗೈದು ಬಿಸಾಡಿ ಹೋಗಲಾಗಿದೆ. ಇಲ್ಲಿನ ಸ್ಥಳೀಯರು ಅರೆಬೆಂದ ಸ್ಥಿತಿಯಲ್ಲಿದ್ದ ಬಾಲಕಿಯ ಮೃತ ದೇಹ ನೋಡಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ದೇಹವನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಿದ್ದಾರೆ. ಈ ವೇಳೆ ಬಾಲಕಿ ಮೇಲೆ ಅತ್ಯಾಚಾರವಾದ ವಿಚಾರ ಬಹಿರಂಗವಾಗಿದೆ.  ಈ ಸಂಬಂಧ ತುರ್ತು ತನಿಖೆ ನಡೆಸಿದ ಪೊಲೀಸರು ಪ್ರಸ್ತುತ ಬಾಲಕಿಯ ಮಲ ತಾಯಿ, ಆಕೆಯ ಪುತ್ರ ಮತ್ತು ಆತನ ಸ್ನೇಹಿತರನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಬಾರಾಮುಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿರ್ ಇಮ್ತಿಯಾಜ್ ಹುಸೇನ್ ಅವರು, ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.