ದೇಶ

ಕೌಟುಂಬಿಕ ಸಮಸ್ಯೆಗಳಿಗೆ 7 ತಿಂಗಳ ಹಸುಗೂಸು ಕಾರಣ: ಹೆತ್ತ ಮಗುವನ್ನೇ ಹತ್ಯೆ ಮಾಡಿದ ಮಹಾತಾಯಿ!

ತನ್ನ ಕೌಟುಂಬಿಕ ಸಮಸ್ಯೆಗಳಿಗೆ 7 ತಿಂಗಳ ಹಸುಗೂಸು ಕಾರಣ ಎಂದು ಹೆತ್ತ ಮಗುವನ್ನು ತಾಯಿಯೇ ಹತ್ಯೆ ಮಾಡಿರುವ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

ಕೌಟುಂಬಿಕ ಸಮಸ್ಯೆಗಳಿಗೆ 7 ತಿಂಗಳ ಹಸುಗೂಸು ಕಾರಣ: ಹೆತ್ತ ಮಗುವನ್ನೇ ಹತ್ಯೆ ಮಾಡಿದ ಮಹಾತಾಯಿ!
ಕೌಟುಂಬಿಕ ಸಮಸ್ಯೆಗಳಿಗೆ 7 ತಿಂಗಳ ಹಸುಗೂಸು ಕಾರಣ: ಹೆತ್ತ ಮಗುವನ್ನೇ ಹತ್ಯೆ ಮಾಡಿದ ಮಹಾತಾಯಿ!
Published On :
ನವದೆಹಲಿ: ತನ್ನ ಕೌಟುಂಬಿಕ ಸಮಸ್ಯೆಗಳಿಗೆ 7 ತಿಂಗಳ ಹಸುಗೂಸು ಕಾರಣ ಎಂದು ಹೆತ್ತ ಮಗುವನ್ನು ತಾಯಿಯೇ ಹತ್ಯೆ ಮಾಡಿರುವ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ. 
ದಕ್ಷಿಣ ದೆಹಲಿಯಲ್ಲಿರುವ ಅದೀಬಾ ಖಾನ್ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆ.20 ರಂದು ಈ ಘಟನೆ ನಡೆದಿದೆ. "ಮಗು ನೀರು ತುಂಬಿದ್ದ ಬಕೆಟ್ ನಲ್ಲಿ ಬಿದ್ದು ಸಾವನ್ನಪ್ಪಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ನೀರಿನಲ್ಲಿ ಮುಳುಗಿದ್ದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕುಳಿಯಲಿಲ್ಲ ಎಂದು ಪೋಷಕರು ಹೇಳಿಕೆ ನೀಡಿದ್ದರು. ಆದರೆ ಪೋಸ್ಟ್ ಮಾರ್ಟಮ್ ವರದಿಯ ಪ್ರಕಾರ ಕುತ್ತಿಗೆ ಭಾಗದಲ್ಲಿ ಮಾರಕ ಒತ್ತಡ ಉಂಟಾಗಿದ್ದರಿಂದ ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. 
ಕೊನೆಗೆ ತಾನೇ ಮಗುವನ್ನು ಹತ್ಯೆ ಮಾಡಿದ್ದೇನೆ ಎಂದು ವಿಚಾರಣೆಯ ಹಂತದಲ್ಲಿ ತಾಯಿ ಒಪ್ಪಿಕೊಂಡಿದ್ದಾರೆ. ಮಗು ಹುಟ್ಟಿದಾಗಿನಿಂದ ಕುಟುಂಬದಲ್ಲಿ ಆರೋಗ್ಯ ಹಾಗೂ ಹಣಕಾಸಿನ ಸಮಸ್ಯೆ ಕಾಣಿಸಿಕೊಂಡಿತ್ತು.  ಈ ಹಿನ್ನೆಲೆಯಲ್ಲಿ ಕುಟುಂಬದ ಸಮಸ್ಯೆಗಳಿಗೆ ಮಗುವೇ ಕಾರಣ ಎಂದು ಉಸಿರುಗಟ್ಟಿಸಿ ಮಗುವನ್ನು ಹತ್ಯೆ ಮಾಡಲಾಗಿದೆ, ನಂತರ ಬಕೆಟ್ ತುಂಬಿದ ನೀರಿನಲ್ಲಿ ಹಾಕಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.