ದೇಶ

ಮೋದಿ 'ಶಿವಲಿಂಗದ ಮೇಲಿನ ಚೇಳು' ಹೇಳಿಕೆ: ಶಿವಭಕ್ತ ರಾಹುಲ್ ಕ್ಷಮೆಗೆ ಬಿಜೆಪಿ ಪಟ್ಟು!

ಪ್ರಧಾನಿ ಮೋದಿ ಆರ್ ಎಸ್ ಎಸ್ ಪಾಲಿಗೆ ಶಿವಲಿಂಗದ ಮೇಲೆ ಕುಳಿತ ಚೇಳಿನಂತಾಗಿದ್ದಾರೆ ಎಂಬ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಶಿವಭಕ್ತ ರಾಹುಲ್ ಗಾಂಧಿ ತಕ್ಷಣವೇ

ಮೋದಿ 'ಶಿವಲಿಂಗದ ಮೇಲಿನ ಚೇಳು' ಹೇಳಿಕೆ: ಶಿವಭಕ್ತ ರಾಹುಲ್ ಕ್ಷಮೆಗೆ ಬಿಜೆಪಿ ಪಟ್ಟು!
ಮೋದಿ 'ಶಿವಲಿಂಗದ ಮೇಲಿನ ಚೇಳು' ಹೇಳಿಕೆ: ಶಿವಭಕ್ತ ರಾಹುಲ್ ನಿಂದ ಕ್ಷಮೆಗೆ ಬಿಜೆಪಿ ಪಟ್ಟು!
Published On :
ನವದೆಹಲಿ: ಪ್ರಧಾನಿ ಮೋದಿ ಆರ್ ಎಸ್ ಎಸ್ ಪಾಲಿಗೆ ಶಿವಲಿಂಗದ ಮೇಲೆ ಕುಳಿತ ಚೇಳಿನಂತಾಗಿದ್ದಾರೆ ಎಂಬ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ,  ಶಿವಭಕ್ತ ರಾಹುಲ್ ಗಾಂಧಿ ತಕ್ಷಣವೇ ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದಿದೆ. 
ಮೋದಿ ಅವರನ್ನು ಟೀಕಿಸುವ ಭರದಲ್ಲಿ ಶಶಿ ತರೂರ್ ಶಿವಲಿಂಗ ಹಾಗೂ ಶಿವನ ಪಾವಿತ್ರ್ಯತೆಯನ್ನು ನಿಂದಿಸಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕನ ಹೇಳಿಕೆಗೆ ಶಿವಭಕ್ತನಾಗಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆಗ್ರಹಿಸಿದ್ದಾರೆ. 
ಬೆಂಗಳೂರಿನ ಸಾಹಿತ್ಯ ಉತ್ಸವದಲ್ಲಿ ' ಭಾನುವಾರ ತನ್ನ ಪುಸ್ತಕ  'The Paradoxical Prime Minister" ದ ಕುರಿತು ಮಾತನಾಡಿದ್ದ ಶಶಿ ತರೂರ್ ಮೋದಿ ಅವರು ಆರ್ ಎಸ್ಎಸ್ ಪಾಲಿಗೆ ನುಂಗಲಾರದ ತುತ್ತಾಗಿದ್ದಾರೆ ಎಂಬುದನ್ನು ಹೇಳುವ ಭರದಲ್ಲಿ "ಆರ್ ಎಸ್ ಎಸ್ ಪಾಲಿಗೆ ಮೋದಿ ಶಿವಲಿಂಗದ ಮೇಲೆ ಕುಳಿತಿರುವ ಚೇಳಿನಂತಾಗಿದ್ದಾರೆ.  ನೀವು ಅದನ್ನು ನಿಮ್ಮ ಕೈಯಿಂದ ತೆಗೆದು ಹಾಕಲೂ ಆಗುವುದಿಲ್ಲ, ಚಪ್ಪಲಿಯಿಂದ ಹೊಡೆಯುವುದಕ್ಕೂ ಆಗುವುದಿಲ್ಲ ಎಂದು ಹೇಳಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.