ಯುಪಿಎಯನ್ನು ಟೀಕಿಸಲು ಹೋಗಿ ತನ್ನ ನಾಯಕನನ್ನು ಟೀಕಿಸಿದ ಬಿಜೆಪಿ!
ಈಗ ತಮ್ಮೊಂದಿಗೇ ಇರುವ ನಾಯಕರು ಹಿಂದೊಮ್ಮೆ ವಿರೋಧಪಕ್ಷದಲ್ಲಿದ್ದುಕೊಂಡು ಮಾಡಿದ್ದ ಯಡವಟ್ಟುಗಳನ್ನು ಟೀಕಿಸುವಾಗ ಪಕ್ಷಾಂತರದ ನಿಜವಾದ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ತಾಜಾ

Published On :
ಹೈದರಾಬಾದ್: ರಾಜಕೀಯ ನಾಯಕರೇನೋ ಸುಲಭವಾಗಿ ಪಕ್ಷ ಬದಲಾವಣೆ ಮಾಡಿಬಿಟ್ಟಿರುತ್ತಾರೆ. ಆದರೆ ಈಗ ತಮ್ಮೊಂದಿಗೇ ಇರುವ ನಾಯಕರು ಹಿಂದೊಮ್ಮೆ ವಿರೋಧಪಕ್ಷದಲ್ಲಿದ್ದುಕೊಂಡು ಮಾಡಿದ್ದ ಯಡವಟ್ಟುಗಳನ್ನು ಟೀಕಿಸುವಾಗ ಪಕ್ಷಾಂತರದ ನಿಜವಾದ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಯುಪಿಎ ವಿರುದ್ಧದ ಬಿಜೆಪಿಯ ಟೀಕೆ.
ವಿಷಯ ಏನಪ್ಪಾ ಅಂದ್ರೆ ಹಿಂದೊಮ್ಮೆ ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಎಸ್ ಎಂ ಕೃಷ್ಣ, ವಿಶ್ವಸಂಸ್ಥೆಯಲ್ಲಿ ತಮ್ಮ ಭಾಷಣ ಓದುವ ಬದಲು ಬೇರೆಯ ದೇಶದ ವಿದೇಶಾಂಗ ಮಂತ್ರಿಗಳ ಭಾಷಣ ಓದಿ ಯಡವಟ್ಟು ಮಾಡಿಕೊಂಡಿದ್ದರು. ಅಂದು ಕಾಂಗ್ರೆಸ್ ನಲ್ಲಿದ್ದ ಎಸ್ ಎಂ ಕೃಷ್ಣ ಈಗ ಬಿಜೆಪಿಯಲ್ಲಿದ್ದಾರೆ. ಯುಪಿಎ ಸರ್ಕಾರದಲ್ಲಿನ ವೈಫಲ್ಯಗಳನ್ನು ಟೀಕಿಸುವ ಭರದಲ್ಲಿ ಬಿಜೆಪಿ ನಾಯಕ ರಾಮ್ ಮಾಧವ್ "ಇಂದು ಪ್ರಧಾನಿ ಮೋದಿ ಹಾಗೂ ಸುಷ್ಮಾ ಸ್ವರಾಜ್ ಜಾಗತಿಕ ಮಟ್ಟದಲ್ಲಿ ಭಾರತದ ಗೌರವವನ್ನು ಹೆಚ್ಚಿಸುವುದಕ್ಕೆ ಶ್ರಮಿಸುತ್ತಿದ್ದಾರೆ, ಆದರೆ ಯುಪಿಎ ಸರ್ಕಾರದಲ್ಲಿದ್ದ ನಮ್ಮ ವಿದೇಶಾಂಗ ಸಚಿವರು ನಮ್ಮ ದೇಶದ ಭಾಷಣ ಓದುವುದನ್ನು ಬಿಟ್ಟು ಬೇರೆಯವರ ಭಾಷಣ ಓದಿ ಮುಜುಗರ ಉಂಟು ಮಾಡಿ, ಹಾಸ್ಯದ ವಸ್ತುವಾಗಿದ್ದರು" ಎಂದು ಹಳೆಯದ್ದನ್ನು ಕೆದಕಿದ್ದಾರೆ.
ರಾಮ್ ಮಾಧವ್ ಅವರು ಯುಪಿಎ ಸರ್ಕಾರವನ್ನು ಟೀಕಿಸಲು ಹೋಗಿ ಎಸ್ ಎಂ ಕೃಷ್ಣ ಅವರು ಮಾಡಿದ್ದ ಯಡವಟ್ಟಿನ ಬಗ್ಗೆ ಲೇವಡಿ ಮಾಡಿದ್ದಾರೆ. ಎಸ್ ಎಂ ಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. 2011 ರಲ್ಲಿ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಬೇಕಿದ್ದ ಎಸ್ ಎಂ ಕೃಷ್ಣ ಪೋರ್ಚುಗೀಸ್ ಸಚಿವರ ಭಾಷಣ ಓದಿ ಸುದ್ದಿಯಾಗಿದ್ದರು. ಈಗ ರಾಮ್ ಮಾಧವ್ ಟೀಕೆಯನ್ನು ಕೇಳಿಸಿಕೊಂಡಿರುವವರು ಕಾಂಗ್ರೆಸ್ ನಲ್ಲಿದ್ದ ಎಸ್ ಎಂ ಕೃಷ್ಣ ಅವರನ್ನೋ ಅಥವಾ ಯುಪಿಎ ಸರ್ಕಾರವನ್ನೋ ಎಂಬ ಕನ್ಫ್ಯೂಷನ್ ನಲ್ಲಿದ್ದಾರೆ.!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


