ಕಲ್ಲು ತೂರಾಟಗಾರರು ಉಗ್ರರ ಕಾರ್ಯಕರ್ತರು: ಸೇನಾ ಮುಖ್ಯಸ್ಥ
ಕಲ್ಲು ತೂರಾಟಗಾರರು ಉಗ್ರರ ಕಾರ್ಯಕರ್ತರು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಶನಿವಾರ ಹೇಳಿದ್ದಾರೆ...

Published On :
ಶ್ರೀನಗರ: ಕಲ್ಲು ತೂರಾಟಗಾರರು ಉಗ್ರರ ಕಾರ್ಯಕರ್ತರು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಶನಿವಾರ ಹೇಳಿದ್ದಾರೆ.
ಕಾಶ್ಮೀರದಲ್ಲಿ ನಡೆದ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದರು.
ಪ್ರಕರಣ ಸಂಬಂಧ ಕಾಲಾಳು ಪಡೆ (ಇನ್'ಫೆಂಟ್ರಿ ಡೇ) ದಿನ ಹಿನ್ನಲೆಯಲ್ಲಿ ರಾಜಧಾನಿ ದೆಹಲಿಯ ಅಮರ ಜವಾನ್ ಜ್ಯೋತಿಯಲ್ಲಿ ವೀರ ಯೋಧರಿಗೆ ನಮನ ಸಲ್ಲಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ರಾವತ್ ಅವರು, ಕಲ್ಲು ತೂರಾಟದ ವೇಳೆ ಹುತಾತ್ಮರಾಗಿರುವ ಯೋಧ ರಸ್ತೆ ನಿರ್ಮಾಣ ಕಾರ್ಯ ನಡೆಸುತ್ತಿದ್ದ ವೇಳೆ ಗಡಿ ರಸ್ತೆಗಳನ್ನು ಕಾಯುತ್ತಿದ್ದ ತಂಡದೊಂದಿಗಿದ್ದರು. ಕೆಲ ಜನರು ಕಲ್ಲು ತೂರಾಟಗಾರರನ್ನು ಭಯೋತ್ಪಾದಕರ ಬೆಂಬಲಿಗರೆಂದು ತಿಳಿಯಬೇಡಿ ಎಂದು ಹೇಳುತ್ತಾರೆ. ಕಲ್ಲು ತೂರಾಟಗಾರರು ಉಗ್ರರ ಕಾರ್ಯಕರ್ತರು. ಪ್ರತೀ ಬಾರಿ ಸೇನೆ ಸುಮ್ಮನೆ ಇದ್ದು, ನೋವನ್ನು ಸಹಿಸಿಕೊಳ್ಳುತ್ತಿರುತ್ತದೆ. ಆದರೆ, ಈ ಬಾರಿ ಕಲ್ಲು ತೂರಾಟಗಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಕಲ್ಲು ತೂರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳಬೇಕೆಂಬುದನ್ನು ಪಾಕಿಸ್ತಾನ ಬಯಸುತ್ತಿದೆ. ಆದರೆ, ಯಾವುದೇ ಪರಿಸ್ಥಿತಿ ಎದುರಿಸಲು ಭಾರತ ಬಲಿಷ್ಠವಾಗಿದೆ. ಯಾವುದೇ ರೀತಿಯ ಕಾರ್ಯಾಚರಣೆ ನಡೆಸಲು ನಾವು ಸಂಪೂರ್ಣವಾಗಿ ಸಾಮರ್ಥ್ಯವನ್ನು ಹೊಂದಿದ್ದೇವೆ.
ತನ್ನ ಯತ್ನಗಳು ಯಶಸ್ಸುಗೊಳ್ಳುವುದಿಲ್ಲ ಎಂದು ಪಾಕಿಸ್ತಾನಕ್ಕೂ ಗೊತ್ತಿದೆ. ಆದರೂ, ಯತ್ನಗಳನ್ನು ಮುಂದುವರೆಸುತ್ತಲೇ ಇದೆ. ಕಾಶ್ಮೀರದಲ್ಲಿ ಹಿಂಸಾಚಾರ ಸದಾಕಾಲ ಜೀವಂತವಾಗಿರುವ ಸಲುವಾಗಿ ಪಾಕಿಸ್ತಾನ ಭಯೋತ್ಪಾದನೆಯನ್ನು ಬಳಕೆ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


