ದೇಶ

ದಾಖಲೆಗಳಿಲ್ಲದ ಬಾಂಗ್ಲಾದೇಶಿಗಳನ್ನು ಗಡಿಪಾರು ಮಾಡಿ: ಬಿಜೆಪಿಗೆ ಅಸ್ಸಾಂ ವಿದ್ಯಾರ್ಥಿ ಒಕ್ಕೂಟದ ಸಲಹೆಗಾರನ ಸವಾಲು!

ಎನ್ ಆರ್ ಸಿಯಲ್ಲಿ ದಾಖಲಾಗದ ಅಕ್ರಮ ಬಾಂಗ್ಲಾದೇಶಿಗಳನ್ನು ಮುಲಾಜಿಲ್ಲದೇ ಗಡಿಪಾರು ಮಾಡಿ ಎಂದು ಅಸ್ಸಾಂ ನ ವಿದ್ಯಾರ್ಥಿ ಒಕ್ಕೂಟದ ಮುಖ್ಯ ಸಲಹೆಗಾರ ಸಂಜುಜಾಲ್ ಭಟ್ಟಾಚಾರ್ಯ ಬಿಜೆಪಿಗೆ ಸವಾಲು

ದಾಖಲೆಗಳಿಲ್ಲದ ಬಾಂಗ್ಲಾದೇಶಿಗಳನ್ನು ಗಡಿಪಾರು ಮಾಡಿ: ಬಿಜೆಪಿಗೆ ಅಸ್ಸಾಂ ವಿದ್ಯಾರ್ಥಿ ಒಕ್ಕೂಟದ ಸಲಹೆಗಾರನ ಸವಾಲು!
Deport undocumented Bangladeshi immigrants, AASU adviser dares BJP
Published On :
ನವದೆಹಲಿ: ಎನ್ ಆರ್ ಸಿಯಲ್ಲಿ ದಾಖಲಾಗದ ಅಕ್ರಮ ಬಾಂಗ್ಲಾದೇಶಿಗಳನ್ನು ಮುಲಾಜಿಲ್ಲದೇ ಗಡಿಪಾರು ಮಾಡಿ ಎಂದು  ಅಸ್ಸಾಂ ನ ವಿದ್ಯಾರ್ಥಿ ಒಕ್ಕೂಟದ ಮುಖ್ಯ ಸಲಹೆಗಾರ ಸಂಜುಜಾಲ್ ಭಟ್ಟಾಚಾರ್ಯ  ಬಿಜೆಪಿಗೆ ಸವಾಲು ಹಾಕಿದ್ದಾರೆ. 
ಎನ್ ಆರ್ ಸಿ ಕುರಿತು ನಡೆದ ಪ್ಯಾನಲ್ ಚರ್ಚೆಯಲ್ಲಿ ಭಟ್ಟಾಚಾರ್ಯ ಬಿಜೆಪಿ ಸವಾಲು ಹಾಕಿದ್ದು, ಎನ್ ಆರ್ ಸಿ ಪ್ರಾರಂಭವಾಗುವುದಕ್ಕೂ ಮುನ್ನ ಇದು ಮುಸ್ಲಿಮರು ಹಾಗೂ ಬೆಂಗಾಲಿಗಳ ವಿರುದ್ಧದ ಮಸೂದೆ ಎಂಬ ಅಭಿಪ್ರಾಯವಿತ್ತು. ಆದರೆ ಸುಪ್ರೀಂ ಕೋರ್ಟ್ ಖುದ್ದು ಮೇಲ್ವಿಚಾರಣೆ ನಡೆಸುವುದಾಗಿ ಹೇಳಿದ ನಂತರ ಈ ಬಗ್ಗೆ ಜನಸಾಮಾನ್ಯರಲ್ಲಿ ಯಾವುದೇ ಅನುಮಾನಗಳೂ ಇಲ್ಲ ಎಂದು ಭಟ್ಟಾಚಾರ್ಯ ಹೇಳಿದ್ದಾರೆ. 
ಈಗ ಬಿಜೆಪಿಗೆ ಧೈರ್ಯವಿರುವುದೇ ಆದರೆ ಎನ್ ಆರ್ ಸಿಯಲ್ಲಿ ಯಾರ ಹೆಸರುಗಳಿಲ್ಲವೋ ಅವರನ್ನು ಗಡಿಪಾರು ಮಾಡಬೇಕು ಎಂದು ಸಂಜುಜಾಲ್ ಭಟ್ಟಾಚಾರ್ಯ ಬಿಜೆಪಿಗೆ ಸವಾಲು ಹಾಕಿದ್ದಾರೆ.  1948-1971 ರಿಂದ ಅಸ್ಸಾಂ ಅಕ್ರಮ ಬಾಂಗ್ಲಾ ವಲಸಿಗರ ಸಮಸ್ಯೆಯನ್ನು ತಡೆದುಕೊಂಡಿತ್ತು ಆ ನಂತರ ತಡೆದುಕೊಳ್ಳಲು ಸಾಧ್ಯವಾಗದೇ ಚಳುವಳಿ ನಡೆಸಲಾಯಿತು. ಈಗ ಬಿಜೆಪಿಗೆ ಧೈರ್ಯವಿದ್ದರೆ ದಾಖಲೆಗಳಿಲ್ಲದ ಬಾಂಗ್ಲಾದೇಶಿಗಳನ್ನು ಗಡಿಪಾರು ಮಾಡಲಿ ಎಂದು ಹೇಳ್ದಿದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.