ದೇಶ

ಶಬರಿಮಲೆ ವಿವಾದ: ಹುಂಡಿಯಲ್ಲಿ ಶಬರಿಮಲೆ ಉಳಿಸಿ ಸಂದೇಶದ ಚೀಟಿ: 45 ಲಕ್ಷ ರೂ ನಷ್ಟ!

ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ನಡೆದಿದ್ದ ಪ್ರತಿಭಟನೆ ದೇವಾಲಯದ ಹುಂಡಿಗೆ ಬರುತ್ತಿದ್ದ ಆದಾಯದ ಮೇಲೆ ಪರಿಣಾಮ ಬೀರಿದೆ.

ಶಬರಿಮಲೆ ವಿವಾದ: ಹುಂಡಿಯಲ್ಲಿ ಶಬರಿಮಲೆ ಉಳಿಸಿ ಸಂದೇಶದ ಚೀಟಿ: 45 ಲಕ್ಷ ರೂ ನಷ್ಟ!
Sabarimala row: Temple collections fall by Rs 45 lakh as devotees fill hundi with paper notes with the message ‘Save Sabarimala’
Published On :
ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ನಡೆದಿದ್ದ ಪ್ರತಿಭಟನೆ ದೇವಾಲಯದ ಹುಂಡಿಗೆ ಬರುತ್ತಿದ್ದ ಆದಾಯದ ಮೇಲೆ ಪರಿಣಾಮ ಬೀರಿದೆ. 
ದೇವಾಲಯದ ಹುಂಡಿಯಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಬರಿಮಲೆಯನ್ನು ರಕ್ಷಿಸಿ, ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಸಂದೇಶಗಳನ್ನು ಹೊಂದಿದ್ದ ಚೀಟಿಗಳನ್ನು ಹಾಕಿದ್ದರು. ಪರಿಣಾಮವಾಗಿ ದೇವಾಲಯಕ್ಕೆ ಹುಂಡಿಯಿಂದ ಬರುತ್ತಿದ್ದ ಆದಾಯ 45 ಲಕ್ಷ ರೂಪಾಯಿಯಷ್ಟು ಕುಸಿದಿದೆ. ಸುಪ್ರೀಂ ಕೋರ್ಟ್ ಆದೇಶದ ನಂತರ ಸರ್ಕಾರದ ಅಧೀನದಲ್ಲಿರುವ ಎಲ್ಲಾ ದೇವಾಲಯಗಳಲ್ಲಿಯೂ ಯಾವ ಹಿಂದೂವೂ ಹುಂಡಿಗಳಿಗೆ ಹಣ ಹಾಕಬಾರದೆಂಬ ಚಳುವಳಿಯನ್ನು ಪ್ರಾರಂಭಿಸಲಾಗಿತ್ತು. 
2017 ಕ್ಕೆ ಹೋಲಿಸಿದಾಗ ದೇವಾಲಯದ ಮೊದಲೆರಡು ದಿನಗಳ ಆದಾಯದಲ್ಲಿ  ಈ ವರ್ಷ 44.5 ಲಕ್ಷ ರೂಪಾಯಿಯಷ್ಟು ಕಡಿಮೆಯಾಗಿದ್ದು  ಕಳೆದ ವರ್ಷ ಮೊದಲ ದಿನವೇ 8.42 ಲಕ್ಷ ರೂಪಾಯಿ ಹುಂಡಿಯಲ್ಲಿ ಸಂಗ್ರಹವಾಗಿತ್ತು, ಆದರೆ ಈ ವರ್ಷ 4.83 ಲಕ್ಷ ರೂಪಾಯಿಯಷ್ಟಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.