ಜೇಟ್ಲಿಯನ್ನು ಸಂಪುಟದಿಂದ ವಜಾಗೊಳಿಸಬೇಕು: ಕಾಂಗ್ರೆಸ್ ನೀಡಿದ ಕಾರಣಗಳಿವು!
ಭಾರತ ಸರ್ಕಾರದ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಅವರ ಪುತ್ರಿ ಹಾಗೂ ಅಳಿಯ ಇಬ್ಬರೂ ವಕೀಲರಾಗಿದ್ದು ಅವರುಗಳು ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ವಜ್ರದ....

Published On :
ನವದೆಹಲಿ: ಭಾರತ ಸರ್ಕಾರದ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಅವರ ಪುತ್ರಿ ಹಾಗೂ ಅಳಿಯ ಇಬ್ಬರೂ ವಕೀಲರಾಗಿದ್ದು ಅವರುಗಳು ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಜತೆ ನಂಟು ಹೊಂದಿದ್ದಾರೆ.ಅವರುಗಳು ಮೆಹುಲ್ ಚೋಕ್ಸಿ ಯಿಂದ 24 ಲಕ್ಷ ರುಪಾಯಿಗಳನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಇದೇ ತಕ್ಷಣ ಜೇಟ್ಲಿ ಸಂಪುಟದಿಂದ ವಜಾಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
2018 ರ ಜನವರಿಯವರೆಗಿನ 44 ತಿಂಗಳೊಳಗೆ ಮೋದಿ ಸರಕಾರವು 90 ಸಾವಿರ ಕೋಟಿ ರೂ. ಮೊತ್ತದ 19,000 ಬ್ಯಾಂಕ್ ವಂಚನೆ ಪ್ರಕರಣಗಳಿಗೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
53 ಸಾವಿರ ಕೋಟಿ ವಂಚಿಸಿದ ಬಳಿಕ 23 ವಂಚಕರು ಭಾರತ ಸರ್ಕಾರದ ಕೃಪೆಯಿಂದ ದೇಶ ತೊರೆದಿದ್ದಾರೆ ಎಂಡು ಅವರು ಆರೋಪಿಸಿದ್ದಾರೆ. ಡೋಲಾಯಮಾನವಾಗಿರುವ ಆರ್ಥಿಕ ಪರಿಸ್ಥಿತಿ, ಬ್ಯಾಂಕಿಂಗ್ ವಂಚನೆಗಳು, ಹಾಗೂ ದೇಶ ತೊರೆಯುವ ವಂಚಕರು ಜೇಟ್ಲಿ ಅವರ 'ನ್ಯೂ ಇಂಡಿಯಾ'ದ ಭಾಗವಾಗಿದ್ದಾರೆ. ಸಚಿವರು ಈಗ ನೈತಿಕ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


