ದೇಶ

ಕಾಶ್ಮೀರದಲ್ಲಿ ಶಾಂತಿ ಬಯಸುತ್ತೇವೆ, ಅದಕ್ಕಾಗಿ ಸಾಕಷ್ಟು ಶ್ರಮ ಪಡುತ್ತಿದ್ದೇವೆ: ರಾಜನಾಥ್ ಸಿಂಗ್

ಕಾಶ್ಮೀರದಲ್ಲಿ ಶಾಂತಿಯನ್ನು ಬಯಸುತ್ತಿದ್ದೇವೆ. ಅದಕ್ಕಾಗಿ ಕೇಂದ್ರ ಸರ್ಕಾರ ಸಾಕಷ್ಟು ಶ್ರಮ ಕೂಡ ಪಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ...

ಕಾಶ್ಮೀರದಲ್ಲಿ ಶಾಂತಿ ಬಯಸುತ್ತೇವೆ, ಅದಕ್ಕಾಗಿ ಸಾಕಷ್ಟು ಶ್ರಮ ಪಡುತ್ತಿದ್ದೇವೆ: ರಾಜನಾಥ್ ಸಿಂಗ್
ದಸರಾ ಹಿನ್ನಲೆಯಲ್ಲಿ ಯೋಧರೊಂದಿಗೆ ಹಬ್ಬವನ್ನಾಚರಿಸುವ ಸಲುವಾಗಿ ರಾಜನಾಥ್ ಸಿಂಗ್ ಅವರು, ರಾಜಸ್ಥಾನದ ಬಿಕಾನೆರ್ ಭಾರತ-ಪಾಕಿಸ್ತಾನ ಗಡಿಗೆ ತೆರಳಿದ್ದಾರೆ.
Published On :
ಬಿಕಾನೆರ್: ಕಾಶ್ಮೀರದಲ್ಲಿ ಶಾಂತಿಯನ್ನು ಬಯಸುತ್ತಿದ್ದೇವೆ. ಅದಕ್ಕಾಗಿ ಕೇಂದ್ರ ಸರ್ಕಾರ ಸಾಕಷ್ಟು ಶ್ರಮ ಕೂಡ ಪಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ. 
ದಸರಾ ಹಿನ್ನಲೆಯಲ್ಲಿ ಯೋಧರೊಂದಿಗೆ ಹಬ್ಬವನ್ನಾಚರಿಸುವ ಸಲುವಾಗಿ ರಾಜನಾಥ್ ಸಿಂಗ್ ಅವರು, ರಾಜಸ್ಥಾನದ ಬಿಕಾನೆರ್ ಭಾರತ-ಪಾಕಿಸ್ತಾನ ಗಡಿಗೆ ತೆರಳಿದ್ದಾರೆ. ಇದರಂತೆ ಇಂದು ಭಾರತೀಯ ಸೇನೆಯ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ್ದಾರೆ. 
ಯೋಧರ ಕುಟುಂಬಸ್ಥರನ್ನು ಭೇಟಿ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, ಕಾಶ್ಮೀರದಲ್ಲಿ ನಾವು ಶಾಂತಿಯನ್ನು ಬಯಸುತ್ತೇವೆ. ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ಸಲುವಾಗಿ ಸಾಕಷ್ಟು ಶ್ರಮ ಕೂಡ ಪಡಲಾಗುತ್ತಿದೆ. ಕಾಶ್ಮೀರ ಅಭಿವೃದ್ಧಿಗೆ ಸಾಕಷ್ಟು ನಿಧಿಯನ್ನು ಮೀಸಲಿಟ್ಟಿದ್ದೇವೆಂದಿದ್ದಾರೆ. 
ಇದೇ ವೇಳೆ ಭಯೋತ್ಪಾದನೆ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಅವರು, ಕಾಶ್ಮೀರಕ್ಕೆ ಬರುತ್ತಿರುವ ಉಗ್ರರೆಲ್ಲರೂ ಪಾಕಿಸ್ತಾನ ಮೂಲದವರೇ ಆಗಿದ್ದಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.