ದೇಶ

ಮಹಿಳೆಯರಿಗೆ ಅಯ್ಯಪ್ಪ ದರ್ಶನ: ರಾಜ್ಯಾದ್ಯಂತ 12 ಗಂಟೆಗಳ ಮುಷ್ಕರಕ್ಕೆ ಶಬರಿಮಲೆ ರಕ್ಷಣೆ ಕಮಿಟಿ ಕರೆ

ಶಬರಿಮಲೆಗೆ ಮಹಿಳೆ ಪ್ರವೇಶಕ್ಕೆ ಸುಪ್ರೀಂ ಆದೇಶವಿದ್ದರೂ ಸಹ ಮಹಿಳೆಯರನ್ನು ದೇವರ ದರ್ಶನಕ್ಕೆ ಹೋಗಗೊಡದೆ ಮಾರ್ಗ ಮದ್ಯೆಯೇ ತಡೆದ್ಯುತ್ತಿರುವುದರಿಂದ ಶಬರಿಮಲೆ ಸುತ್ತಲ ಪ್ರದೇಶದಲ್ಲಿ.....

ಮಹಿಳೆಯರಿಗೆ ಅಯ್ಯಪ್ಪ ದರ್ಶನ: ರಾಜ್ಯಾದ್ಯಂತ 12 ಗಂಟೆಗಳ ಮುಷ್ಕರಕ್ಕೆ ಶಬರಿಮಲೆ ರಕ್ಷಣೆ ಕಮಿಟಿ ಕರೆ
ಸಂಗ್ರಹ ಚಿತ್ರ
Published On :
ತಿರುವನಂತಪುರಂ: ಶಬರಿಮಲೆಗೆ ಮಹಿಳೆ ಪ್ರವೇಶಕ್ಕೆ ಸುಪ್ರೀಂ ಆದೇಶವಿದ್ದರೂ ಸಹ ಮಹಿಳೆಯರನ್ನು ದೇವರ ದರ್ಶನಕ್ಕೆ ಹೋಗಗೊಡದೆ ಮಾರ್ಗ ಮದ್ಯೆಯೇ ತಡೆದ್ಯುತ್ತಿರುವುದರಿಂದ ಶಬರಿಮಲೆ ಸುತ್ತಲ ಪ್ರದೇಶದಲ್ಲಿ ತೀವ್ರ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದೆ. ಈ ನಡುವೆ ಶಬರಿಮಲೆ ರಕ್ಷಣೆ ಕಮಿಟಿ ಗುರುವಾರ ಕೇರಳದಲ್ಲಿ 12 ಗಂಟೆಗಳ ರಾಜ್ಯ ಮುಷ್ಕರಕ್ಕೆ ಕರೆ ನೀಡಿದೆ. 
ಬುಧವಾರ ಅಯ್ಯಪ್ಪ ಸ್ವಾಮಿ ದೇವಾಲಯ ತೆರೆದಿದ್ದು ಸ್ವಾಮಿ ದರ್ಶನ ಆರಂಭವಾಗಿದೆ. ಆದರೆ ಮೊದಲ ದಿನ ಮಹಿಳೆಯರಿಗೆ ಅವಕಾಶ ಸಿಗಲಿಲ್ಲ. ಪಂಪಾ, ನೀಲಕ್ಕಲ್‌  ಗ್ರಾಮಗಳು ಸೇರಿ ಶಬರಿಮಲೆಗೆ ತೆರಳುವ ಮಾರ್ಗವು ಅಕ್ಷರಶಃ ರಣಾಂಗಣವಾಗಿದ್ದವು.
ಬುಧವಾರ ನಡೆದ ಹಿಂಸಾಚಾರದ  ಕುರಿತು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ವರದಿ ಕಳಿಸಲಾಗಿದೆ ಎಂದು ಎ ಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಐದು ದಿನಗಳ ತುಲಾ ಪೂಜೆ ಮುಕ್ತಾಯದ ನಂತರ ದೇವಸ್ಥಾನ ಬಂದ್ ಆಗುವವರೆಗೂ ನಿಳಕ್ಕಲ್ ನಲ್ಲಿ ಪ್ರತಿಭಟನೆ  ಮುಂದುವರಿಯಲಿದೆ ಎಂದು ಹಿಂದೂ ಐಕ್ಯ ಸಂಘಟನೆ ಮುಕಂಡರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.