ತಿತ್ಲಿ ಚಂಡಮಾರುತಕ್ಕೆ ಮಗಳು ಬಲಿ, ಕರುಳ ಕುಡಿ ಕೊಳೆತ ಶವ ಹೊತ್ತು 8 ಕಿ.ಮೀ ಸಾಗಿದ ತಂದೆ!
ತಿತ್ಲಿ ಚಂಡಮಾರುತದ ಹೊಡೆತಕ್ಕೆ ಆಂಧ್ರ ಪ್ರದೇಶ ಹಾಗೂ ಒಡಿಶಾ ತತ್ತರಿಸಿತ್ತು. ಇದೀಗ ತಿತ್ಲಿ ಅಬ್ಬರ ಕಡಿಮೆಯಾದ ಬೆನ್ನಲ್ಲೇ ಮನಕಲಕುವ ಘಟನೆಯೊಂದು ಒಡಿಶಾದ ಗಜಪತಿ ಜಿಲ್ಲೆಯಲ್ಲಿ ನಡೆದಿದೆ...

Published On :
ಗಜಪತಿ(ಒಡಿಶಾ): ತಿತ್ಲಿ ಚಂಡಮಾರುತದ ಹೊಡೆತಕ್ಕೆ ಆಂಧ್ರ ಪ್ರದೇಶ ಹಾಗೂ ಒಡಿಶಾ ತತ್ತರಿಸಿತ್ತು. ಇದೀಗ ತಿತ್ಲಿ ಅಬ್ಬರ ಕಡಿಮೆಯಾದ ಬೆನ್ನಲ್ಲೇ ಮನಕಲಕುವ ಘಟನೆಯೊಂದು ಒಡಿಶಾದ ಗಜಪತಿ ಜಿಲ್ಲೆಯಲ್ಲಿ ನಡೆದಿದೆ.
ತಿತ್ಲಿ ಚಂಡಮಾರುತದ ಪರಿಣಾಮ ಸೃಷ್ಟಿಯಾಗಿದ್ದ ಪ್ರವಾಹದಲ್ಲಿ ಅಟಂಕ್ ಪುರ ಗ್ರಾಮದ ಮುಕುಂದ್ ದೋರಾ ಎಂಬುವರ ಎಂಟು ವರ್ಷದ ಮಗಳು ಬಬಿತಾ ಕೊಚ್ಚಿ ಹೋಗಿದ್ದಳು.
ಎಂಟು ದಿನಗಳ ಸತತ ಹುಡುಕಾಟದ ಬಳಿಕ ಬಬಿತಾ ಶವ ಪತ್ತೆಯಾಗಿತ್ತು. ಮಗಳ ಕೊಳೆತ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತಂದೆ ಮುಕುಂದ್ ಎಂಟು ಕಿ.ಮೀ ದೂರದವರೆಗೆ ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದು ಈ ದೃಶ್ಯ ಅಲ್ಲಿನ ಗ್ರಾಮಸ್ಥರನ್ನು ಮೂಕರನ್ನಾಗಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


