ದೇಶ

ಬಿಜೆಪಿಯಿಂದಾಗಿ ಹಿಂದೂ ಸಹೋದರರು ನನ್ನನ್ನು ಪ್ರಚಾರಕ್ಕೆ ಕರೆಯುತ್ತಿಲ್ಲ: ಗುಲಾಂ ನಬಿ ಆಜಾದ್

ಈ ಮೊದಲು ಹೆಚ್ಚಿನ ಸಂಖ್ಯೆಯ ಹಿಂದೂ ನಾಯಕರು ನನ್ನನ್ನು ಚುನಾವಣಾ ಪ್ರಚಾರಕ್ಕಾಗಿ ಕರೆಯುತ್ತಿದ್ದರು. ಆದರೆ ಈಗ ಅವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ..

ಬಿಜೆಪಿಯಿಂದಾಗಿ ಹಿಂದೂ ಸಹೋದರರು ನನ್ನನ್ನು  ಪ್ರಚಾರಕ್ಕೆ ಕರೆಯುತ್ತಿಲ್ಲ: ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್
Published On :
ಲಕ್ನೋ: ಈ ಮೊದಲು ಹೆಚ್ಚಿನ ಸಂಖ್ಯೆಯ ಹಿಂದೂ ನಾಯಕರು ನನ್ನನ್ನು ಚುನಾವಣಾ ಪ್ರಚಾರಕ್ಕಾಗಿ ಕರೆಯುತ್ತಿದ್ದರು. ಆದರೆ ಈಗ ಅವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಹೇಳಿದ್ದಾರೆ,
ತಾವು ಯುವ ನಾಯಕರಾಗಿದ್ದಾಗಿಂದಲೂ ದೇಶಾದ್ಯಂತ ಪಕ್ಷದ  ಹಲವು ನಾಯಕರ ಪರವಾಗಿ ನಾನು ಪ್ರಚಾರ ಮಾಡಿದ್ದೇನೆ, ಅದರಲ್ಲಿ ಹಿಂದೂ ನಾಯಕರುಗಳು ಇದ್ದರು. ನಾನು ಯೂತ್ ಕಾಂಗ್ರೆಸ್ ನಾಯಕನಾದಾಗಿನಿಂದ, ಅಡಮಾನ್ ನಿಕೋಬಾರ್, ಸೇರಿ ದೇಶದ ಹಲವು ಭಾಗಗಳಲ್ಲಿ ಪ್ರಚಾರ ಕಾರ್ಯಕ್ರಮ ಮಾಡಿದ್ದೇನೆ, ಅದರಲ್ಲಿ ಶೇ. 95 ರಷ್ಟು ಹಿಂದುಗಳಿದ್ದರು, ಕೇವಲ ಶೇ,5 ರಷ್ಟು ಮಾತ್ರ ಮುಸ್ಲಿಂ ನಾಯಕರುಗಳಿದ್ದರು ಎಂದು ಹೇಳಿದ್ದಾರೆ,
ಆದರೆ ಕಳೆದ 4 ವರ್ಷಗಳಿಂದ ನಾನು ಅಂಕಿ ಅಂಶಗಳನ್ನು ಗಮನಿಸಿದ್ದೇನೆ,  ಎಲ್ಲೋ ಕೆಲವು ಕಡೆ ತಪ್ಪಾಗಿದೆ, ಇಂದಿನ ದಿನಗಳಲ್ಲಿ ಜನ ನನ್ನನ್ನು ಪ್ರಚಾರಕ್ಕೆ ಕರೆಯಲು ಹಿಂದು ಮುಂದು ನೋಡುತ್ತಾರೆ.ಅವರ ವೋಟ್ ಬ್ಯಾಂಕ್  ಮೇಲೆ ಪರಿಣಾಮ ಬೀರುತ್ತದೆ ಎಂಬ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಜನರಲ್ಲಿ ಬಿಜೆಪಿ ಮೈಂಡ್ ಸೆಟ್ ಬದಲಾಯಿಸಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.