ದೇಶ

'ಆಕೆ ಅಶ್ಲೀಲವಾಗಿ ಕೈ ಬೆರಳು ತೋರಿಸಿದ್ದಳು': ಶರಣಾಗತಿಗೂ ಮುನ್ನ ಬಿಎಸ್‌ಪಿ ನಾಯಕನ ಪುತ್ರನ ಹೇಳಿಕೆ

ದೆಹಲಿ ಪಚತಾರಾ ಹೊಟೆಲ್ ಆವರಣದಲ್ಲಿ ಮಹಿಳೆಗೆ ಪಿಸ್ತೂಲ್ ತೋರಿಸಿದ ಪ್ರಕರಣದ ಆರೋಪಿ ಹಾಗೂ ಬಿಎಸ್ ಪಿ ಮುಖಂಡನ ಪುತ್ರ ಆಶೀಶ್ ಕೊನೆಗೂ ಪೊಲೀಸರಿಗೆ ಶರಣಾಗಿದ್ದಾರೆ.

'ಆಕೆ ಅಶ್ಲೀಲವಾಗಿ ಕೈ ಬೆರಳು ತೋರಿಸಿದ್ದಳು': ಶರಣಾಗತಿಗೂ ಮುನ್ನ ಬಿಎಸ್‌ಪಿ ನಾಯಕನ ಪುತ್ರನ ಹೇಳಿಕೆ
ಸಂಗ್ರಹ ಚಿತ್ರ
Published On :
ನವದೆಹಲಿ: ದೆಹಲಿ ಪಚತಾರಾ ಹೊಟೆಲ್ ಆವರಣದಲ್ಲಿ ಮಹಿಳೆಗೆ ಪಿಸ್ತೂಲ್ ತೋರಿಸಿದ ಪ್ರಕರಣದ ಆರೋಪಿ ಹಾಗೂ ಬಿಎಸ್ ಪಿ ಮುಖಂಡನ ಪುತ್ರ ಆಶೀಶ್ ಕೊನೆಗೂ ಪೊಲೀಸರಿಗೆ ಶರಣಾಗಿದ್ದಾರೆ.
ಬಿಎಸ್‌ಪಿ ಮಾಜಿ ಸಂಸದನ ಪುತ್ರ ಆಶಿಶ್‌ ಪಾಂಡೆ ಗುರುವಾರ ನ್ಯಾಯಾಲಯಕ್ಕೆ ಶರಣಾಗಿದ್ದು, ಶರಣಾಗತಿಗೂ ಮುನ್ನ ವಿಡಿಯೋ ಮೂಲಕ ತನ್ನದೇನೂ ತಪ್ಪಿಲ್ಲ ಎಂದು ಹೇಳಿಕೊಂಡಿದ್ದಾನೆ. 
ಆಕೆ ಅಶ್ಲೀಲವಾಗಿ ಕೈ ಬೆರಳು ತೋರಿಸಿದ್ದಳು ಎಂದು ವಿಡಿಯೋದಲ್ಲಿ ಹೇಳಿಕೊಂಡಿರುವ ಆಶಿಶ್ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. 'ದೇಶದಾದ್ಯಂತ ಪೊಲೀಸರು ನನ್ನನ್ನು ಭಯೋತ್ಪಾದಕನಂತೆ ಬಿಂಬಿಸಿದ್ದಾರೆ, ಇದಕ್ಕೆ ಅವರು ಹೊರಡಿಸಿರುವ ನೋಟಿಸ್‌ ಸಾಕ್ಷಿಯಾಗಿದೆ. ಬೇಕಾದರೆ ನೀವೇ ಸಿಸಿ ಕ್ಯಾಮೆರಾದ ದೃಶ್ಯಾವಳಿವಳಿಗಳನ್ನು ಪರಿಶೀಲಿಸಿ, ಯಾರು ಮಹಿಳೆಯರ ಶೌಚಾಲಯಕ್ಕೆ ಹೋದರು, ಯಾರು ಯಾರನ್ನು ನಿಂದಿಸಿದರು ಎಂಬುದು ಗೊತ್ತಾಗುತ್ತದೆ'.
ನನ್ನ ರಕ್ಷಣೆಗಾಗಿ ಪಿಸ್ತೂಲನ್ನು ಹೊಂದಿದ್ದೇನೆ, ಅದು ಯಾವಾಗಲೂ ನನ್ನೊಂದಿಗೆ ಇರುತ್ತದೆ. ಅಂದು ನಾನು ಅದನ್ನು ಬೆದರಿಸಲಿಕ್ಕೆ ಬಳಕೆ ಮಾಡಿಲ್ಲ ಎಂದು ಆಶಿಶ್ ಹೇಳಿಕೊಂಡಿದ್ದಾರೆ. ಅಲ್ಲದೆ ವಿಡಿಯೋ ಶೇರ್ ಮಾಡುವುದನ್ನು ನಿಲ್ಲಿಸಿ. ಇದರಿಂದ ನಾನು ಸಾಕಷ್ಟು ನೊಂದಿದ್ದೇನೆ ಎಂದು ಆಶಿಶ್ ಮನವಿ ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.