ಹಿಮಾಚಲ ಪ್ರದೇಶದಲ್ಲಿ ನಿರ್ಮಾಣವಾಗಲಿದೆ ದೇಶದ ಮೊದಲ ಸುರಂಗ ರೈಲು ನಿಲ್ದಾಣ
ಹಿಮಾಚಲ ಪ್ರದೇಶದಲ್ಲಿ ಸುಮಾರು 3 ಸಾವಿರ ಮೀಟರ್ ಎತ್ತರ ಪ್ರದೇಶದಲ್ಲಿ ದೇಶದ ಮೊದಲ ಸುರಂಗ ರೈಲು....

Published On :
ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಸುಮಾರು 3 ಸಾವಿರ ಮೀಟರ್ ಎತ್ತರ ಪ್ರದೇಶದಲ್ಲಿ ದೇಶದ ಮೊದಲ ಸುರಂಗ ರೈಲು ನಿಲ್ದಾಣ ನಿರ್ಮಾಣವಾಗಲಿದೆ ಎಂದು ಹಿರಿಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಈಗಾಗಲೇ ದೆಹಲಿ ಹಾಗೂ ಇತರೆ ನಗರಗಳಲ್ಲಿ ಹಲವು ಸುರಂಗ ಮೆಟ್ರೊ ರೈಲು ನಿಲ್ದಾಣಗಳಿವೆ. ಆದರೆ ಇದೇ ಮೊದಲ ಬಾರಿಗೆ ಬಿಲಾಸ್ಪುರ್-ಮನಾಲಿ-ಲೇಹ್ ಮಾರ್ಗದಲ್ಲಿ ಸುರಂಗ ರೈಲು ನಿಲ್ದಾಣ ನಿರ್ಮಾಣವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಉತ್ತರ ಮನಾಲಿಯಿಂದ 26 ಕಿ.ಮೀ. ದೂರದಲ್ಲಿರುವ ಕೆಯ್ಲೊಂಗ್ ನಲ್ಲಿ ಈ ಸುರಂಗ ರೈಲು ನಿಲ್ದಾಣ ನಿರ್ಮಾಣವಾಗುತ್ತಿದ್ದು, ಇದು ಭಾರತ-ಟಿಬೆಟ್ ಗಡಿಯಿಂದ 120 ಕಿ.ಮೀ.ದೂರದಲ್ಲಿದೆ.
ಮೊದಲ ಹಂತದ ಸ್ಥಳ ಸಮೀಕ್ಷೆ ಪ್ರಕಾರ ಕೆಯ್ಲೊಂಗ್ ನಿಲ್ದಾಣ ಸುರಂಗ ಮಾರ್ಗದಲ್ಲಿ ನಿರ್ಮಾಣವಾಗಲಿದೆ. ಇದು ದೇಶದ ಮೊದಲ ಸುರಂಗ ರೈಲು ನಿಲ್ದಾಣವಾಗಲಿದೆ ಮತ್ತು ಯೋಜನೆ ಸಂಪೂರ್ಣ ಮುಕ್ತಾಯವಾದರೆ ಈ ಮಾರ್ಗದಲ್ಲಿ ಅಂತಹ ಹಲವು ಸುರಂಗ ರೈಲು ನಿಲ್ದಾಣಗಳಿರಲಿವೆ ಎಂದು ಉತ್ತರ ರೈಲ್ವೆಯ ಮುಖ್ಯ ಎಂಜಿನಿಯರ್(ನಿರ್ಮಾಣ) ಡಿಆರ್ ಗುಪ್ತಾ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


