ಅಲಹಾಬಾದ್ ಇನ್ಮುಂದೆ 'ಪ್ರಯಾಗ್ ರಾಜ್'; ಮರುನಾಮಕರಣಕ್ಕೆ ಯೋಗಿ ಸಂಪುಟ ಅನುಮೋದನೆ
ಪ್ರಯಾಗನಗರಿ ಅಲಹಾಬಾದ್ ಅನ್ನು ಪ್ರಯಾಗ್ ರಾಜ್ ಎಂದು ಉತ್ತರ ಪ್ರದೇಶ ಸರ್ಕಾರ ಮರುನಾಮಕರಣ ಮಾಡಿದೆ.

Published On :
ಲಖನೌ: ಪ್ರಯಾಗನಗರಿ ಅಲಹಾಬಾದ್ ಅನ್ನು ಪ್ರಯಾಗ್ ರಾಜ್ ಎಂದು ಉತ್ತರ ಪ್ರದೇಶ ಸರ್ಕಾರ ಮರುನಾಮಕರಣ ಮಾಡಿದೆ.
ಅಲಹಾಬಾದ್ ನಗರಕ್ಕೆ ಪ್ರಯಾಗ್ ರಾಜ್ ಎಂದು ಮರುನಾಮಕರಣ ಮಾಡುವ ಗೊತ್ತುವಳಿಗೆ ಸಿಎಂ ಯೋಗಿ ಆದಿತ್ಯಾನಾಥ್ ನೇತೃತ್ವದ ಸಂಪುಟ ಸಭೆ ಅನುಮೋದನೆ ನೀಡಿದ್ದು, ಇಂದಿನಿಂದಲೇ ಅಲಹಾಬಾದ್ ನಗರವನ್ನು ಪ್ರಯಾಗ್ ರಾಜ್ ಎಂದು ಕರೆಯುವಂತೆ ಸುತ್ತೋಲೆ ಹೊರಡಿಸಲಾಗಿದೆ.
ನೂತನ ಹೆಸರು ಇಂದಿನಿಂದ ಜಾರಿಗೆ ಬಂದಿರುವುದಾಗಿ ರಾಜ್ಯದ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಅವರು ಹೇಳಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಅಂತೆಯೇ ಈ ಕುರಿತಂತೆ ಹೊಸ ಆದೇಶವನ್ನು ಪಾಲನೆ ಮಾಡಲು ಸರಕಾರದ ಪ್ರತಿಯೊಂದು ಇಲಾಖೆಗೂ ಸುತ್ತೋಲೆ ಕಳುಹಿಸಲಾಗುವುದು ಎಂದು ಸಂಪುಟ ತಿಳಿಸಿದೆ.
ಈ ಹಿಂದೆ ಇದೇ ಯೋಗಿ ಸರ್ಕಾರ, ಮುಘಲ್‌ಸರಾಯ್ ಜಂಕ್ಷನ್ ಮತ್ತು ಮುಘಲ್‌ಸರಾಯ್ ಅನ್ನು ಕ್ರಮವಾಗಿ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಜಂಕ್ಷನ್ ಹಾಗೂ ದೀನ್ ದಯಾಳ್ ಉಪಾಧ್ಯಾಯ ನಗರ ಎಂದು ಮರುನಾಮಕರಣ ಮಾಡಿತ್ತು.
ಅಲ್ಲದೇ ಅಲಹಾಬಾದ್ ಮರುನಾಮಕರಣದ ಕುರಿತು ಸುಳಿವು ಬಿಟ್ಟುಕೊಟ್ಟಿದ್ದ ಸಿಎಂ ಯೋಗಿ ಆದಿತ್ಯಾನಾಥ್ ಅವರು,'ಗಂಗೆ ಹಾಗೂ ಯಮುನೆಯರು ಕೂಡುವ ಪವಿತ್ರ ಸಂಗಮ ಸ್ಥಳವಾದ ಕಾರಣ ಮತ್ತು ಈ ಊರು ಎಲ್ಲ ಪ್ರಯಾಗಗಳ ರಾಜನಾದ ಕಾರಣ ಅಲಹಾಬಾದ್ ಅನ್ನು ಪ್ರಾಯಾಗ್‌ರಾಜ್ ಎಂದು ಕರೆಯುತ್ತೇವೆ. ಅಲಹಾಬಾದ್ ಅನ್ನು ಪ್ರಯಾಗ್‌ರಾಜ್ ಎಂದು ಕರೆಯಬೇಕೆಂಬುದು ಕೆಲವರ ಆಶಾಯವಾಗಿದೆ. ಎಲ್ಲರೂ ಒಪ್ಪಿದರೆ ಈ ನಗರವನ್ನು ಪ್ರಯಾಗ್‌ರಾಜ್ ಎಂದು ಕರೆಯುತ್ತೇವೆ. ಇದೊಂದು ಉತ್ತಮ ಆರಂಭವಾಗಲಿದೆ' ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Uttar pradeshಉತ್ತರ ಪ್ರದೇಶಲಖನೌAllahabadಅಲಹಾಬಾದ್LucknowCM Yogi Adityanathಸಿಎಂ ಯೋಗಿ ಆದಿತ್ಯಾನಾಥ್Prayagrajಪ್ರಯಾಗ್ ರಾಜ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


