ಸುಪ್ರೀಂ ಆದೇಶಕ್ಕೆ ಡೋಂಟ್ ಕೇರ್ : ಶಬರಿಮಲೆ ಮಹಿಳೆಯರ ಪ್ರವೇಶಕ್ಕೆ ತಡೆ!
ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸುವುದಾಗಿ ಎಲ್ ಡಿಎಫ್ ಸರ್ಕಾರದ ಮುಖ್ಯಮಂತ್ರಿ ಪಿಣರಾಯ್ ವಿಜಯ್ ಹೇಳುತ್ತಿದ್ದರೂ ಇಂದು ಶಬರಿಮಲೆಯ ನೀಲಕಂಠದಲ್ಲಿ ಕೆಎಸ್ ಆರ್ ಟಿಸಿ ಬಸ್ ನಿಂದ ಮಹಿಳಾ ಭಕ್ತಾಧಿಗಳನ್ನು ಪ್ರತಿಭಟನಾಕಾರರು ಹೊರದಬ್ಬಿದ ಘಟನೆ ನಡೆದಿದೆ.

ನೀಲಕಂಠ: ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆಗೆ ಮಹಿಳೆಯರ ಅವಕಾಶ ಕಲ್ಪಿಸುವ ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸುವುದಾಗಿ ಎಲ್ ಡಿಎಫ್ ಸರ್ಕಾರದ ಮುಖ್ಯಮಂತ್ರಿ ಪಿಣರಾಯ್ ವಿಜಯ್ ಹೇಳುತ್ತಿದ್ದರೂ ಇಂದು ಶಬರಿಮಲೆಯ ನೀಲಕಂಠದಲ್ಲಿ ಕೆಎಸ್ ಆರ್ ಟಿಸಿ ಬಸ್ ನಿಂದ ಮಹಿಳಾ ಭಕ್ತಾಧಿಗಳನ್ನು ಪ್ರತಿಭಟನಾಕಾರರು ಹೊರದಬ್ಬಿದ ಘಟನೆ ನಡೆದಿದೆ.
ತುಳ್ಳಂ ಪೂಜೆಗಾಗಿ ನಾಳೆಯಿಂದ ದೇವಸ್ಥಾನ ಪುನರ್ ಆರಂಭಗೊಳ್ಳಲಿದೆ. ಈ ಮಧ್ಯೆ ಯಾರೊಬ್ಬರು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ವಿಜಯ್ ಪಿಣರಾಯ್ ಎಚ್ಚರಿಕೆಯ ಸಂದೇಶ ರವಾನಿಸಿದ್ದು, ಶಬರಿಮಲೆಗೆ ತೆರಳುವ ಎಲ್ಲ ಭಕ್ತರೂ ಪೂಜೆ ಸಲ್ಲಿಸಲು ಸರ್ಕಾರ ಎಲ್ಲಾ ವ್ಯವ್ಯಸ್ಥೆ ಮಾಡಲಿದೆ ಎಂದು ಹೇಳಿದ್ದಾರೆ.
ಪಂಪಾ ನದಿ ದಂಡೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳ ಮೂಲಗಳಿಂದ ತಿಳಿದುಬಂದಿದೆ. ಈ ಹಿಂದೆಯೂ ಕೂಡಾ ಮಹಿಳಾ ಅಧಿಕಾರಿಗಳನ್ನು ಆಯೋಜಿಸಲಾಗಿತ್ತು, ಆದಾಗ್ಯೂ, ಸನ್ನಿದಿಯಲ್ಲಿ ಮಹಿಳಾ ಅಧಿಕಾರಿ ನಿಯೋಜಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


