ಲೈಂಗಿಕ ಕಿರುಕುಳ ಆರೋಪ ಸುಳ್ಳು,ನಿರಾಧಾರವಾದದ್ದು: ಅಕ್ಬರ್, ರಾಜೀನಾಮೆ ಬಗ್ಗೆ ಸಚಿವರ ಮೌನ
ಸುಮಾರು ಹನ್ನೆರಡು ಮಹಿಳಾ ಪತ್ರಕರ್ತರು ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ಆರೋಪ ಹೊತ್ತಿರುವ ಕೇಂದ್ರ ಸಚಿವ ಅಕ್ಬರ್ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ್ದು ತಮ್ಮ ಮೇಲಿನ ಆರೋಪ....

Published On :
ನವದೆಹಲಿ ಸುಮಾರು ಹನ್ನೆರಡು ಮಹಿಳಾ ಪತ್ರಕರ್ತರು ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ಆರೋಪ ಹೊತ್ತಿರುವ ಕೇಂದ್ರ ಸಚಿವ ಅಕ್ಬರ್ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ್ದು ತಮ್ಮ ಮೇಲಿನ ಆರೋಪಗಳೆಲ್ಲಾ "ಸುಳ್ಳು, ಆಧಾರರಹಿತ" ಎಂದಿದ್ದಾರೆ. ಅಲ್ಲದೆ ಈ ಸಂಬಂಧ ಕಾನೂನು ಹೋರಾಟಕ್ಕೆ ಸಹ ತಾವು ಸಿದ್ದ ಎಂದು ಘೋಷಿಸಿದ್ದಾರೆ.
ಕೆಲ ಸಮಯದಿಂದ ಸಾಕ್ಷಾಧಾರಗಳಿಲ್ಲದ ಆರೋಪಗಳೂ ವೈರಲ್ ಆಗುತ್ತಿದೆ.ಈಗ ನಾನು ವಿದೇಶದಿಂದ ಹಿಂತಿರುಗಿದ್ದೇನೆ. ನನ್ನ ವಕೀಲರು ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಲ್ಳುತ್ತಾರೆ.ಎಂದು ಅಕ್ಬರ್ ಹೇಳಿದರು. ಅಧಿಕೃತ ನೈಜೀರಿಯಾ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಅಕ್ಬರ್ ಭಾನುವಾರ ದೆಹಲಿಗೆ ಆಗಮಿಸಿದಾರೆ.
ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನಿಡಿರುವ ಸಚಿವರು ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ತಾವೇನಾದರೂ ರಾಜೀನಾಮೆ ಸಲ್ಲಿಸುತೇವೆಯೆ ಎನ್ನುವ ಕುರಿತು ಏನನ್ನೂ ಹೇಳಲಿಲ್ಲ.
"ಮಹಾಚುನಾವಣೆಗೆ ಕೆಲ ತಿಂಗಳಿರುವಾಗ ಈ ಮೀಟೂ ಅಭಿಯಾನ ತಾರಕಕ್ಕೇರಿರುವ ಹಿಂದೆ ಯಾವುದಾದರೂ ಅಜೆಂಡಾ ಇದೆಯೆ?ನೀವೇ ನ್ಯಾಯಾನ್ಯಾಯವನ್ನು ಪರಿಶೀಲಿಸಿ, ಈ ಸುಳ್ಳು, ಆಧಾರರಹಿತ ಆರೋಪಗಳಿಂದ ನನ್ನ ಖ್ಯಾತಿಗೆ ಮಸಿ ಬಳಿಯುವ ಪ್ರಯತ್ನ ನಡೆದಿದೆ
"ಸುಳ್ಳಿಗೆ ಕಾಲುಗಳಿಲ್ಲ ಆದರೆ ಅವು ವಿಷಕಾರಿಯಾಗಿರುತ್ತದೆ.ಅದನ್ನೊಂದು ಉನ್ಮಾದವೆಂಬಂತೆ ಕಾಣಲಾಗುತ್ತದೆ. ಇದರಿಂದ ಆಳವಾದ ನೋವು ಉಂಟಾಗುತ್ತದೆ.ನಾನು ಸರಿಯಾದ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದೇನೆ" ಎಂದು ಏಷ್ಯನ್ ಏಜ್ ನ ಮಾಜಿ ಸಂಪಾದಕ ಅಕ್ಬರ್ ನುಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


