ಮಹಿಳಾ ಪತ್ರಕರ್ತೆಯರು ತುಂಬಾ ಮುಗ್ಧರೇನು ಅಲ್ಲ: #MeToo ಬಗ್ಗೆ ಬಿಜೆಪಿ ನಾಯಕಿ
ಈಗಾಗಲೇ #MeToo ಅಭಿಯಾನದಲ್ಲಿ ಕೇಂದ್ರ ಸಚಿವ ಎಂಜೆ ಅಕ್ಬರ್ ಹೆಸರು ತಳುಕುಹಾಕಿಕೊಂಡಿದ್ದು, ಬಿಜೆಪಿ ಸಂಸದರೊಬ್ಬರು ಅಭಿಯಾನದ ಉದ್ದೇಶ ಶುದ್ಧಿಯನ್ನೇ ಪ್ರಶ್ನಿಸಿದ್ದಾರೆ.

Published On :
ಈಗಾಗಲೇ #MeToo ಅಭಿಯಾನದಲ್ಲಿ ಕೇಂದ್ರ ಸಚಿವ ಎಂಜೆ ಅಕ್ಬರ್ ಹೆಸರು ತಳುಕುಹಾಕಿಕೊಂಡಿದ್ದು, ಬಿಜೆಪಿ ಸಂಸದರೊಬ್ಬರು ಅಭಿಯಾನದ ಉದ್ದೇಶ ಶುದ್ಧಿಯನ್ನೇ ಪ್ರಶ್ನಿಸಿದ್ದಾರೆ. ಇಷ್ಟು ಸಾಲದೆಂಬಂತೆ ಈಗ ಮತ್ತೋರ್ವ ಬಿಜೆಪಿ ನಾಯಕಿ #MeToo ಅಭಿಯಾನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇತರರ ವಿರುದ್ಧ ಲೈಂಗಿಕ ಆರೋಪ ಮಾಡುತ್ತಿರುವ ಮಹಿಳಾ ಪತ್ರಕರ್ತೆಯರೇನು ಮುಗ್ಧರಲ್ಲ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಲತಾ ಕೇಲ್ಕರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ತಾವು ಮಹಿಳಾ ಪತ್ರಕರ್ತೆಯರನ್ನು ಮತ್ತೊಬ್ಬರು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಬಿಡುವಷ್ಟು ಮುಗ್ಧರೆಂದು ಪರಿಗಣಿಸುವುದಿಲ್ಲವೆಂದು ಹೇಳಿದ್ದಾರೆ. ಆದರೆ #MeToo ಅಭಿಯಾನವನ್ನು ತಾವು ಸ್ವಾಗತಿಸುವುದಾಗಿ ಹೇಳಿರುವ ಲತಾ ಕೇಲ್ಕರ್, ಈ ಅಭಿಯಾನ ಮಹಿಳೆಯರಿಗೆ ತಮಗಾದ ನೋವನ್ನು ಹೇಳಿಕೊಳ್ಳುವ ಶಕ್ತಿ ತಂದುಕೊಟ್ಟಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


