ದೇಶ

ರಾಫೆಲ್ ಡೀಲ್: ರಾಹುಲ್‌ ಗಾಂಧಿ ಒಬ್ಬ ಸರಣಿ ಸುಳ್ಳುಗಾರ - ಕೇಂದ್ರ ಸಚಿವ

ರಾಫೆಲ್ ಡೀಲ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಅವರ ಪಕ್ಷ ಸುಳ್ಳುಗಳನ್ನು...

ರಾಫೆಲ್ ಡೀಲ್: ರಾಹುಲ್‌ ಗಾಂಧಿ ಒಬ್ಬ ಸರಣಿ ಸುಳ್ಳುಗಾರ - ಕೇಂದ್ರ ಸಚಿವ
ಪಿಯೂಷ್ ಗೋಯಲ್
Published On :
ನವದೆಹಲಿ: ರಾಫೆಲ್ ಡೀಲ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಅವರ ಪಕ್ಷ ಸುಳ್ಳುಗಳನ್ನು ಹರಡುತ್ತಿದ್ದು, ರಾಹುಲ್ ಒಬ್ಬ ಸರಣಿ ಸುಳ್ಳುಗಾರ ಎಂದು ರೇಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಶುಕ್ರವಾರ ಆರೋಪಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗೋಯಲ್, ಇತ್ತೀಚಿನ ದಿನಗಳಲ್ಲಿ ನಾವು ಒಬ್ಬ ಸರಣಿ ಸುಳ್ಳುಗಾರನ ಚಟುವಟಿಕೆಗಳಿಗೆ ಸಾಕ್ಷಿಯಾಗುತ್ತಿದ್ದೇವೆ. ಒಬ್ಬ ಮನುಷ್ಯ ಪದೇ ಪದೇ ಒಂದೇ ವಿಷಯವನ್ನು ಪುನರುಚ್ಚರಿಸುತ್ತಾನೆಂದರೆ ಆತನ ಬಳಿ ಬೇರೆ ಯಾವುದೇ ವಿಷಯ ಇಲ್ಲ ಎಂದರ್ಥ ಎಂದಿದ್ದಾರೆ.
ರಾಹುಲ್‌ ಗಾಂಧಿ ಅವರು ನೂರು ಬಾರಿ ಸುಳ್ಳನ್ನು ಪುನರುಚ್ಚರಿಸಿದರೂ ರಫೇಲ್‌ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು. 
2007 ಮತ್ತು 2012ರಲ್ಲಿ ಅಂದಿನ ಯುಪಿಎ ಸರ್ಕಾರ ಒಪ್ಪಿಕೊಂಡದ್ದಕ್ಕಿಂತಲೂ ಅತ್ಯುತ್ತಮ ಬೆಲೆಯಲ್ಲಿ ಎನ್‌ಡಿಎ ಸರ್ಕಾರ ರಾಫೆಲ್ ಡೀಲ್ ಅನ್ನು ಅಂತಿಮಗೊಳಿಸಿದೆ. ಈ ವಹಿವಾಟಿನಲ್ಲಿ ನಮಗೆ ಶೀಘ್ರ ಪೂರೈಕೆ, ದೀರ್ಘ‌ ನಿರ್ವಹಣಾ ಅವಧಿ, ಬಿಡಿ ಭಾಗಗಳ ಲಭ್ಯತೆ ಮತ್ತು ಅತ್ಯಅಗತ್ಯವಿರುವ ರಕ್ಷಣಾ ಸಾಮರ್ಥ್ಯ ಇತ್ಯಾದಿಗಳನ್ನು ಖಾತರಿ ಪಡಿಸಿಕೊಂಡಿದ್ದೇವೆ ಎಂದು ಗೋಯಲ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.