ಕೇರಳ ಮರು ನಿರ್ಮಾಣಕ್ಕೆ 27 ಸಾವಿರ ಕೋಟಿ ರೂ ಅಗತ್ಯವಿದೆ: ವಿಶ್ವಸಂಸ್ಥೆ ಅಂಗ ವರದಿ
ಪ್ರವಾಹಪೀಡಿತ ಕೇರಳ ರಾಜ್ಯದ ಪುನರ್ ನಿರ್ಮಾಣಕ್ಕೆ ಸುಮಾರು 27 ಸಾವಿರ ಕೋಟಿ ...

ತಿರುವನಂತಪುರ: ಪ್ರವಾಹಪೀಡಿತ ಕೇರಳ ರಾಜ್ಯದ ಪುನರ್ ನಿರ್ಮಾಣಕ್ಕೆ ಸುಮಾರು 27 ಸಾವಿರ ಕೋಟಿ ರೂಪಾಯಿಗಳು ಬೇಕಾಗಬಹುದು ಎಂದು 11 ವಿಶ್ವಸಂಸ್ಥೆ ಅಂಗಗಳೊಂದಿಗೆ ವಿಪತ್ತು ಪೂರ್ವ ಅಗತ್ಯ ಮೌಲ್ಯಮಾಪನ (ಪಿಡಿಎನ್ಎ) ಕರಡು ವರದಿ ತಿಳಿಸಿದೆ. ಇಂತಹ ವರದಿಯನ್ನು ಪಿಡಿಎನ್ಎ ಭಾರತದಲ್ಲಿ ತಯಾರಿಸುತ್ತಿರುವುದು ಇದೇ ಮೊದಲು.
ಈ ವರದಿಯನ್ನು ವಿಶ್ವಸಂಸ್ಥೆ ತಂಡ ರಾಜ್ಯ ಮುಖ್ಯ ಕಾರ್ಯದರ್ಶಿ ಟಾಮ್ ಜೊಸ್, ವಿಶ್ವಸಂಸ್ಥೆಯ ಸ್ಥಳೀಯ ಸಹಯೋಜಕ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಮುಖ್ಯಸ್ಥ ಡಾ ಹೆಂಕ್ ಬೆಕೆಡಮ್ ಮತ್ತು ವೆಂಕಟೇಶಪತಿ ಐಎಎಸ್, ಪಿಡಿಎನ್ಎ ರಾಜ್ಯ ಸಂಯೋಜಕ ಮತ್ತು ಮೀನುಗಾರಿಕೆ ಇಲಾಖೆ ನಿರ್ದೇಶಕರಿಗೆ ಅವರಿಗೆ ಸಲ್ಲಿಸಿದೆ. ಪ್ರವಾಹ ಪೀಡಿತ ಕೇರಳ ರಸ್ತೆಗಳ ಮರು ನಿರ್ಮಾಣಕ್ಕೆ 8,554 ಕೋಟಿ ರೂಪಾಯಿ, ವಸತಿ ನಿರ್ಮಾಣಕ್ಕೆ 5,659 ಕೋಟಿ, ಕೃಷಿ, ಮೀನುಗಾರಿಕೆ ಮತ್ತು ಜಾನುವಾರಗಳ ಮೇವು ಇತ್ಯಾದಿಗೆ 4,499 ಕೋಟಿ ರೂಪಾಯಿ, ಜನಜೀವನಕ್ಕೆ 3,903 ಕೋಟಿ ರೂ, ನೀರಾವರಿಗೆ 1,484 ಕೋಟಿ ರೂ. ನೀರು ಮತ್ತು ಸ್ವಚ್ಛತೆಗೆ 1,331 ಕೋಟಿ ರೂಪಾಯಿಗಳ ಅಗತ್ಯವಿದೆ ಎಂದು ವರದಿಯಲ್ಲಿ ವಿವರಿಸಿದೆ.
ಹಸಿರು ರಾಜ್ಯ: ವರದಿಯಲ್ಲಿ ಕೇರಳವನ್ನು ಮೊದಲ ಹಸಿರು ರಾಜ್ಯವನ್ನಾಗಿ ಮಾಡಬೇಕೆಂದು ಸೂಚಿಸಲಾಗಿದೆ. ಕೇರಳ ರಾಜ್ಯವನ್ನು ಈ ಹಿಂದಿನಂತೆ ಮಾಡಲು ಹಲವು ಆಲೋಚನೆಗಳು, ಅಭಿಪ್ರಾಯಗಳನ್ನು ನೀಡಲಾಗಿದೆ. ಅದಕ್ಕಾಗಿ ಸುಮಾರು 12 ಲಕ್ಷ ಮನೆಗಳು ಮತ್ತು ಫ್ಲಾಟ್ ಗಳಿಗೆ ಪ್ರತ್ಯೇಕ ತೆರಿಗೆ ದರವನ್ನು ವಿಧಿಸಬೇಕೆಂದು ಸೂಚಿಸಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಹಿರಿಯ ಅಧಿಕಾರಿಯೊಬ್ಬರು, ಜಗತ್ತಿನಲ್ಲಿ ಮುಂದುವರಿದ ದೇಶಗಳಲ್ಲಿ ಈ ತೆರಿಗೆ ವ್ಯವಸ್ಥೆಯಿದ್ದು ಮನೆಗಳು ಮತ್ತು ಫ್ಲಾಟ್ ಗಳಿಗೆ ತೆರಿಗೆ ದರ ಹೆಚ್ಚಿಸಿದರೆ ಕಡಿಮ ಬಾಡಿಗೆ ನೀಡಲಾಗುತ್ತದೆ. ಅಂದರೆ ದೇಶದ ಆರ್ಥಿಕತೆಗೆ ಹಣ ವಿನಿಯೋಗವಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


