ದೇಶ

ಯಾವುದೇ ಪೊಲೀಸರು ಶಸ್ತ್ರಾಸ್ತ್ರ, ಶೂ ಧರಿಸಿ ಪುರಿ ಜಗನ್ನಾಥ ದೇಗುಲ ಪ್ರವೇಶಿಸಬಾರದು: ಸುಪ್ರೀಂ ಕೋರ್ಟ್

ಶಸ್ತ್ರಾಸ್ತ್ರ ಹಾಗೂ ಶೂ ಧರಿಸಿ ಯಾವುದೇ ಪೊಲೀಸರು ಕೂಡ ಜಗತ್ಪ್ರಸಿದ್ಧ ಪುರಿ ಜಗನ್ನಾಥ ದೇಗುಲ ಪ್ರವೇಶ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ...

ಯಾವುದೇ ಪೊಲೀಸರು ಶಸ್ತ್ರಾಸ್ತ್ರ, ಶೂ ಧರಿಸಿ ಪುರಿ ಜಗನ್ನಾಥ ದೇಗುಲ ಪ್ರವೇಶಿಸಬಾರದು: ಸುಪ್ರೀಂ ಕೋರ್ಟ್
ಸಂಗ್ರಹ ಚಿತ್ರ
Published On :
ನವದೆಹಲಿ: ಶಸ್ತ್ರಾಸ್ತ್ರ ಹಾಗೂ ಶೂ ಧರಿಸಿ ಯಾವುದೇ ಪೊಲೀಸರು ಕೂಡ ಜಗತ್ಪ್ರಸಿದ್ಧ ಪುರಿ  ಜಗನ್ನಾಥ ದೇಗುಲ ಪ್ರವೇಶ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. 
ಜಗನ್ನಾಥ ದೇಗುಲದಲ್ಲಿ ಹೊಸ ಕ್ಯೂ ವ್ಯವಸ್ಥೆಯಿಂದ ಬೇಸಕ್ತ ಭಕ್ತಾದಿಗಳು ಅ.3 ರಂದು ಬಂದ್'ಗೆ ಕರೆ ನೀಡಿದ್ದರು. ಈ ಬಂದ್ ಹಿಂಸಾರೂಪಕ್ಕೆ ತಿರುಗಿತ್ತು. ಪ್ರತಿಭಟನೆಗಿಳಿದಿದ್ದ ಭಕ್ತರು ಏಕಾಏಕಿ ದೇವಸ್ಥಾನದ ಆಡಳಿತ ಮಂಡಳಿಯ ಕಚೇರಿ ಮೇಲೆ ದಾಳಿ ನಡೆಸಿದ್ದರು. 
ಘಟನೆಗೆ ಸಂಬಂಧಿಸಿದಂತೆ ಸಂಘಟನೆಯೊಂದು ನ್ಯಾಯಾಲಯದ ಮೆಟ್ಟಿಲೇರಿತ್ತು. ಪುರಿ  ಜಗನ್ನಾಥ ದೇಗುಲದೊಳಗೆ ಪೊಲೀಸರು ಶಸ್ತ್ರಾಸ್ತ್ರ ಹಾಗೂ ಶೂಗಳನ್ನು ಧರಿಸಿ ಪ್ರವೇಶ ಮಾಡುತ್ತಿದ್ದಾರೆ. ಪ್ರಕರಣ ಸಂಬಂಧ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿಕೊಂಡಿದ್ದು, 
ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಮದನ್ ಬಿ ಲೋಕುರ್ ಹಾಗೂ ದೀಪಕ್ ಗುಪ್ತಾ ಅವರು, ಯಾವುದೇ ಪೊಲೀಸರೇ ಆಗಲಿ ಶಸ್ತ್ರಾಸ್ತ್ರ ಹಾಗೂ ಶೂ ಧರಿಸಿ ದೇಗುಲ ಪ್ರವೇಶಿಸುವಂತಿಲ್ಲ ಎಂದು ಹೇಳಿದೆ. 
ವಿಚಾರಣೆ ವೇಳೆ ನ್ಯಾಯಾಲಕ್ಕೆ ಮಾಹಿತಿ ನೀಡಿರುವ ಒಡಿಶಾ ಸರ್ಕಾರ ಪ್ರಕರಣ ಸಂಬಂಧ ಈ ವರೆಗೂ 47 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದ್ದು, ಪ್ರಸ್ತುತ ವಾತಾವರಣ ನಿಯಂತ್ರಣದಲ್ಲಿದೆ. ದೇಗುಲದ ಆವರಣದಲ್ಲಿ ಯಾವುದೇ ರೀತಿಯ ಹಿಂಸಾಚಾರಗಳು ನಡೆಯುತ್ತಿಲ್ಲ. ದೇಗುಲದ ಕಚೇರಿಯನ್ನು ದೇಗುಲದಿಂದ 500 ಮೀಟರ್ ಗಳಷ್ಟು ದೂರ ಇರಿಸಲಾಗಿದೆ ಎಂದು ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.