ದೇಶ

ನೆಸ್ ವಾಡಿಯಾ ವಿರುದ್ಧ ಪ್ರೀತಿ ಜಿಂಟಾ ದಾಖಲಿಸಿದ್ದ ಲೈಂಗಿಕ ಕಿರುಕುಳ ಕೇಸ್ ವಜಾ

ಉದ್ಯಮಿ ನೆಸ್ ವಾಡಿಯಾ ಅವರ ವಿರುದ್ಧ ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ದಾಖಲಿಸಿದ್ದ ಲೈಂಗಿಕ ಕಿರುಕುಳ...

ನೆಸ್ ವಾಡಿಯಾ ವಿರುದ್ಧ ಪ್ರೀತಿ ಜಿಂಟಾ ದಾಖಲಿಸಿದ್ದ ಲೈಂಗಿಕ ಕಿರುಕುಳ ಕೇಸ್ ವಜಾ
ಪ್ರೀತಿ ಜಿಂಟಾ - ನೆಸ್ ವಾಡಿಯಾ
Published On :
ಮುಂಬೈ: ಉದ್ಯಮಿ ನೆಸ್ ವಾಡಿಯಾ ಅವರ ವಿರುದ್ಧ ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣವನ್ನು ಬುಧವಾರ ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.
ತಮ್ಮ ವಿರುದ್ಧ ನಟಿ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ನೆಸ್ ವಾಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಂಜಿತ್ ಮೊರೆ ಹಾಗೂ ಭಾರತಿ ಎಚ್ ಡಾಂಗ್ರೆ ಅವರು ಇಂದು ಪ್ರಕರಣವನ್ನು ವಜಾಗೊಳಿಸಿ ಆದೇಶಿಸಿದ್ದಾರೆ.
ಕೋರ್ಟ್ ಎರಡು ದಿನಗಳ ಹಿಂದಷ್ಟೆ ಈ ಪ್ರಕರಣವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳುವಂತೆ ಜಿಂಟಾಗೆ ಸೂಚಿಸಿತ್ತು. ಆದರೆ, ವಿಚಾರಣೆಗೆ ಮನವಿ ಮಾಡಿದ್ದ ಪ್ರೀತಿ ಜಿಂಟಾಗೆ ಈಗ ಹಿನ್ನಡೆಯಾಗಿದೆ. 
ಉದ್ಯಮಿ ನೆಸ್ ವಾಡಿಯಾ ಅವರು ಕ್ಷಮೆಯಾಚಿಸಿದರೆ ಮಾತ್ರ ಅರ್ಜಿ ಹಿಂಪಡೆಯಲು ನನ್ನ ಕಕ್ಷಿದಾರರು ಸಿದ್ಧರಾಗಿದ್ದಾರೆ ಎಂದು ಪ್ರೀತಿ ಜಿಂಟಾ ಅವರ ವಕೀಲರು ಕೋರ್ಟಿಗೆ ತಿಳಿಸಿದ್ದರು. ಆದರೆ, ನೆಸ್ ವಾಡಿಯಾ ಕ್ಷಮೆಯಾಚಿಸಲು ನಿರಾಕರಿಸಿದ್ದರು.
2014ರ ಮೇ 30ರಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ ವೇಳೆ ನೆಸ್ ವಾಡಿಯಾ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪ್ರೀಂತಾ ಜಿಂಟಾ ದೂರು ನೀಡಿದ್ದರು. 
ನೆಸ್ ವಾಡಿಯಾ ಅವರು ಟೀಂ ಮುಂದೆ ನನ್ನನ್ನು ದಬಾಯಿಸಿದ್ದಲ್ಲದೆ, ನನ್ನ ರಟ್ಟೆ ಹಿಡಿದು ಎಳೆದಾಡಿದರು. ನನಗೆ ಅಪಮಾನ ಮಾಡಿ, ಕೆಟ್ಟ ಶಬ್ದಗಳಿಂದ ನಿಂದಿಸಿದರು ಎಂದು ಪ್ರೀತಿ ದೂರಿದ್ದರು.  ಪ್ರೀತಿ ಜಿಂಟಾ ನೀಡಿದ ದೂರಿನ ಅನ್ವಯ ಪೊಲೀಸರು ಜೂನ್ 13, 2014ರಂದು ಐಪಿಸಿ ಸೆಕ್ಷನ್ 354, 504, 506, 509 ಅನ್ವಯ ದೂರು ದಾಖಲಿಸಿಕೊಂಡಿದ್ದರು, 2018ರ ಫೆಬ್ರವರಿಯಲ್ಲಿ ವಾಡಿಯಾ ವಿರುದ್ಧ ಚಾರ್ಜ್ ಶೀಟ್ ಸಹ ಹಾಕಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.