ದೇಶ

ಕೇಂದ್ರ ಸಚಿವ ಎಂಜೆ ಅಕ್ಬರ್ ನ್ನೂ ಬಿಡದ #MeToo ಚಳುವಳಿ: ಸಹೋದ್ಯೋಗಿ ವಿರುದ್ಧದ ಆರೋಪಕ್ಕೆ ಉತ್ತರಿಸದ ಸುಷ್ಮಾ ಸ್ವರಾಜ್!

#MeToo ಅಭಿಯಾನ ಈಗ ಕೇಂದ್ರ ಸಚಿವ, ಮಾಜಿ ಪತ್ರಕರ್ತ ಎಂಜೆ ಅಕ್ಬರ್ ಅವರನ್ನೂ ಸುತ್ತಿಕೊಂಡಿದೆ.

ಕೇಂದ್ರ ಸಚಿವ ಎಂಜೆ ಅಕ್ಬರ್ ನ್ನೂ ಬಿಡದ #MeToo ಚಳುವಳಿ: ಸಹೋದ್ಯೋಗಿ ವಿರುದ್ಧದ ಆರೋಪಕ್ಕೆ ಉತ್ತರಿಸದ ಸುಷ್ಮಾ ಸ್ವರಾಜ್!
ಎಂಜೆ ಅಕ್ಬರ್
Published On :
ಉದ್ಯೋಗದಲ್ಲಿರುವ ಮಹಿಳೆಯರು ತಮಗೆ ಹಿರಿಯ ಅಧಿಕಾರಿಗಳು ಹಾಗೂ ಕಚೇರಿಯ ಸಹೋದ್ಯೋಗಿಗಳಿಂದ ಎದುರಾದ ಲೈಂಗಿಕ ಕಿರುಕುಳದ ಬಗ್ಗೆ ಹೇಳುವುದಕ್ಕಾಗಿ ಆರಂಭಿಸಿರುವ #MeToo ಅಭಿಯಾನ ಈಗ ಕೇಂದ್ರ ಸಚಿವ, ಮಾಜಿ ಪತ್ರಕರ್ತ ಎಂಜೆ ಅಕ್ಬರ್ ಅವರನ್ನೂ ಸುತ್ತಿಕೊಂಡಿದೆ. 
ಪ್ರಿಯಾ ರಮಣಿ ಅವರು ವೋಗ್‌ ಇಂಡಿಯಾದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲೇಖನವೊಂದನ್ನು ಬರೆದಿದ್ದರು. ಅದರಲ್ಲಿ ತಾವು ಸಂದರ್ಶನದ ವೇಳೆ ಎದುರಿಸಿದ್ದ ಲೈಂಗಿಕ ಕಿರುಕುಳದ ಬಗ್ಗೆ ಉಲ್ಲೇಖಿಸಿ ಭಾರತೀಯ ಪತ್ರಿಕೋದ್ಯಮದ ಪ್ರಸಿದ್ಧ ವ್ಯಕ್ತಿಯ ವಿರುದ್ಧ ಆರೋಪ ಮಾಡಿದ್ದರು. ಆದರೆ ಪತ್ರಕರ್ತರ ಹೆಸರನ್ನು ಎಲ್ಲೂ ಉಲ್ಲೇಖಿಸಿರಲಿಲ್ಲ. ಆದರೆ ಈಗ ಆ ಹೆಸರನ್ನು ಪ್ರಿಯಾ ರಮಣಿ ಬಹಿರಂಗಪಡಿಸಿದ್ದು, ಅವರು ಕಳೆದ ವರ್ಷ ಉಲ್ಲೇಖಿಸಿದ್ದ ವ್ಯಕ್ತಿ ಮಾಜಿ ಪತ್ರಕರ್ತ, ಈಗಿನ ಕೇಂದ್ರ ಸಚಿವ ಎಂಜೆ ಅಕ್ಬರ್ ಎಂದು ಟ್ವೀಟ್ ಮಾಡಿದ್ದಾರೆ.
ಎಂಜೆ ಅಕ್ಬರ್ ವಿರುದ್ಧ ಹಲವು ಮಹಿಳೆಯರು ಇಂಥದ್ದೇ ಆರೋಪ ಮಾಡಿದ್ದು, ಮತ್ತೋರ್ವ ಮಹಿಳೆ ತಾವು ಅಕ್ಬರ್ ಅವರೊಂದಿಗಿನ ಸಂದರ್ಶನದಲ್ಲಿ ಕಿರಿಕಿರಿ ಎದುರಿಸಿದ್ದಕ್ಕಾಗಿ ಕೆಲಸ ನಿರಾಕರಿಸಲಾಯಿತು ಎಂದು ಹೇಳಿದ್ದಾರೆ.  ಇದೇ ವೇಳೆ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿರುವ ಎಂಜೆ ಅಕ್ಬರ್ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮಹಿಳಾ ಬರಹಗಾರ್ತಿಯರು ಪ್ರಶ್ನೆ ಕೇಳಿದ್ದು ಸ್ವರಾಜ್ ನಿರುತ್ತರಾಗಿದ್ದಾರೆ. 
ಎಂಜೆ ಅಕ್ಬರ್ ವಿರುದ್ಧ ಕೇಳಿಬಂದಿರುವ ಆರೋಪಗಳು ಗಂಭೀರವಾದವು. ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಾ? ಎಂದು ಪತ್ರಕರ್ತೆಯರು ಸುಷ್ಮಾ ಸ್ವರಾಜ್ ಅವರನ್ನು ಕೇಳಿದ್ದಾರೆ. ಆದರೆ ಸುಷ್ಮಾ ಸ್ವರಾಜ್ ಇದಕ್ಕೆ ಯಾವುದೇ ಉತ್ತರ ನೀಡಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.