14 ತಿಂಗಳ ಮಗು ಅತ್ಯಾಚಾರ: ವಲಸಿಗರ ಮೇಲೆ ಹಲ್ಲೆ, ಗುಜರಾತ್ ಪೊಲೀಸರಿಂದ 342 ಮಂದಿ ಬಂಧನ!
ಸೆಪ್ಟೆಂಬರ್ 28ರಂದು ಗುಜರಾತ್ ನ ಸಬರ್ ಕಾಂತ್ ಜಿಲ್ಲೆಯ ಹಿಮ್ಮತ್ ನಗರ ಸಮೀಪದ ಹಳ್ಳಿಯೊಂದರಲ್ಲಿ 14 ತಿಂಗಳ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆದಿತ್ತು...

Published On :
ಅಹಮದಾಬಾದ್(ಗುಜರಾತ್): ಸೆಪ್ಟೆಂಬರ್ 28ರಂದು ಗುಜರಾತ್ ನ ಸಬರ್ ಕಾಂತ್ ಜಿಲ್ಲೆಯ ಹಿಮ್ಮತ್ ನಗರ ಸಮೀಪದ ಹಳ್ಳಿಯೊಂದರಲ್ಲಿ 14 ತಿಂಗಳ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರಿ ಮೂಲದ ರವೀಂದ್ರ ಸಾಹು ಎಂಬಾತನನ್ನು ಬಂಧಿಸಲಾಗಿತ್ತು.
ಈ ಪ್ರಕರಣದ ನಂತರ ವಾಟ್ಸ್ಆ್ಯಪ್ ನಲ್ಲಿ ವಲಸಿಗರ ವಿರುದ್ಧ ಸೇಡಿನ ಸಂದೇಶಗಳು ಹರಿದಾಡುತ್ತಿದ್ದು ಇದರಿಂದಾಗಿ ಗುಜರಾತ್ ನ ಅನೇಕ ಕಡೆ ವಲಸಿಗರ ಮೇಲೆ ದಾಳಿಗಳಾಗುತ್ತಿವೆ. ಅದರಲ್ಲೂ ಉತ್ತರಪ್ರದೇಶ ಮತ್ತು ಬಿಹಾರ ಮೂಲದವರನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆಯುತ್ತಿವೆ. ಈ ಸಂಬಂಧ ಇಲ್ಲಿಯವರೆಗೂ ಗುಜರಾತ್ ಪೊಲೀಸರು 342 ಮಂದಿಯನ್ನು ಬಂಧಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಗುಜರಾತ್ ನಲ್ಲಿ ಬದುಕು ಕಟ್ಟಿಕೊಳ್ಳಲು ಬಂದಿದ್ದಂತಹ ವಲಸಿಗರು ಭಯದ ಜೀವನ ನಡೆಸುತ್ತಿದ್ದಾರೆ. ಅತ್ಯಾಚಾರಕ್ಕೊಳಗಾದ ಮಗು ಪ್ರಬಲ ಠಾಕೂರ್ ಸಮುದಾಯಕ್ಕೆ ಸೇರಿದ್ದಾದ್ದರಿಂದ ಠಾಕೂರ್ ಸೇನಾ ಸಂಘಟನೆಯ ಕಾರ್ಯಕರ್ತರು ದೊಡ್ಡ ದೊಂಬಿ ನಡೆಸಿದ್ದಾರೆ.
ಅಕ್ಟೋಬರ್ 2ರಂದು ಮೆಹ್ಸಾನ್ ಜಿಲ್ಲೆಯ ಫ್ಯಾಕ್ಟರಿಯೊಂದಕ್ಕೆ ನುಗ್ಗಿದ 200 ಜನರ ಗುಂಪು ಅಲ್ಲಿಯ ಇಬ್ಬರು ನೌಕರರ ಮೇಲೆ ಹಲ್ಲೆ ಮಾಡಿದ್ದರು. ಇನ್ನು ವಲಸಿಗರ ಮನೆಗಳಿಗೆ ನುಗ್ಗಿ ನಾಳೆಯೇ ಮನೆ ಬಿಟ್ಟು ಹೋಗುವಂತೆ ಬೆದರಿಕೆ ಹಾಕಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


