ಉತ್ತರ್ ಖಂಡ್ : ಕಾರ್ಯಕ್ಷಮತೆ ಮತ್ತು ಸಂಭಾವ್ಯ ನೀತಿ ಪ್ರಗತಿಯ ಮೂಲಗಳಾಗಿವೆ -ನರೇಂದ್ರ ಮೋದಿ
ಕಾರ್ಯಕ್ಷಮತೆ ಮತ್ತು ಸಂಭಾವ್ಯ ನೀತಿ ಪ್ರಗತಿಯ ಮೂಲಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಡೆಹ್ರಾಡೂನ್ : ಕಾರ್ಯಕ್ಷಮತೆ ಮತ್ತು ಸಂಭಾವ್ಯ ನೀತಿ ಪ್ರಗತಿಯ ಮೂಲಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ್ ಖಂಡ್ ಹೂಡಿಕೆದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರಸರ್ಕಾರ ದೇಶದಲ್ಲಿ ಸುಲಭ ವ್ಯವಹಾರದ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶದಲ್ಲಿ ಮಹತ್ವದ ಬದಲಾವಣೆಯಾಗುತ್ತಿದ್ದು, ಪಾರದರ್ಶಕ ಹಾಗೂ ಕ್ಷಿಪ್ರಗತಿಯ ತೆರಿಗೆ ವ್ಯವಸ್ಥೆಯ ಅನುಷ್ಟಾನಕ್ಕೆ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.
ದಿವಾಳಿತನ ಕಾರಣ ವ್ಯವಹಾರವನ್ನು ಸುಲಭವಾಗಿ ಮಾಡುವುದರಿಂದ ಬ್ಯಾಂಕಿಂಗ್ ವ್ಯವಸ್ಥೆ ಸದೃಢಗೊಳ್ಳಲಿದೆ. ದೇಶದಲ್ಲಿ ವಿತ್ತೀಯ ಕೊರತೆ ಕಡಿಮೆಯಾಗಿದೆ ಎಂದು ಮೋದಿ ಹೇಳಿದರು.
ದೇಶದ ಆಧುನಿಕತೆಯತ್ತ ಹೊರಳುತ್ತಿದ್ದು, 400 ರೈಲ್ವೆ ನಿಲ್ದಾಣಗಳನ್ನು ಆಧುನೀಕರಣಗೊಳಿಸಲಾಗಿದೆ. 100 ವಿಮಾನ ನಿಲ್ದಾಣ ಹಾಗೂ ಹೆಲಿಪ್ಯಾಡ್ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.ಆಯುಷ್ಮನ್ ಭಾರತ್ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಹೂಡಿಕೆಯ ಅವಕಾಶವಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


