ಬಡವರ ಹಸಿವು ನೀಗಿಸಲು ರಾಹುಲ್ ಗಾಂಧಿ ಹೆಸರಲ್ಲಿ ಕ್ಯಾಂಟೀನ್ ಆರಂಭಿಸಿದ ಸನ್ಯಾಸಿ!
ಬಡವರ ಹಸಿವು ನೀಗಿಸುವ ಸಲುವಾಗಿ ಸನ್ಯಾಸಿಯೊಬ್ಬರು ಉತ್ತರಪ್ರದೇಶದ ಉನ್ನಾವೊ-ರಾಯ್ ಬರೇಲಿ ಮಾರ್ಗದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೆಸರಲ್ಲಿ...

Published On :
ಬೆಥಾರ್: ಬಡವರ ಹಸಿವು ನೀಗಿಸುವ ಸಲುವಾಗಿ ಸನ್ಯಾಸಿಯೊಬ್ಬರು ಉತ್ತರಪ್ರದೇಶದ ಉನ್ನಾವೊ-ರಾಯ್ ಬರೇಲಿ ಮಾರ್ಗದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೆಸರಲ್ಲಿ ಕ್ಯಾಂಟೀನ್ ತೆರೆಯುವ ಮೂಲಕ ಜನರ ಗಮನ ಸೆಳೆದಿದ್ದಾರೆ.
ಜುನಾ ಅಖಾರಾದ ನಾಗಾ ಸಾಧು ಎಂದು ಹೇಳಿಕೊಳ್ಳುವ ಸನ್ಯಾಸಿ ಮೂರು ವಾರಗಳ ಹಿಂದಷ್ಟೇ ಈ ಕ್ಯಾಂಟಿನ್ ಆರಂಭಿಸಿದ್ದಾರೆ. ಬಡ ಜನರಿಗೆ ಉಚಿತವಾಗಿ ಆಹಾರ ವಿತರಿಸುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ.
ರಾಜು ಬಾಬಾ ತಾನೊಬ್ಬ ಶಿವಭಕ್ತ, ರಾಹುಲ್ ಗಾಂಧಿ ಸಹ ಶಿವಭಕ್ತ. ಹೀಗಾಗಿ ನಾವು ಸಹೋದರರಿದ್ದಂತೆ. ಹೀಗಾಗಿ ಅವರ ಹೆಸರಿಲ್ಲಿ ಕ್ಯಾಂಟೀನ್ ಆರಂಭಿಸಿದ್ದೇನೆ. ನಮ್ಮ ಕ್ಯಾಂಟೀನ್ ನಲ್ಲಿ ಪ್ರತಿದಿನ 150ಕ್ಕೂ ಹೆಚ್ಚು ಜನ ಆಹಾರ ಸೇವಿಸುತ್ತಾರೆ. ಸ್ವಇಚ್ಛೆಯಿಂದ ಹಣ ಕೊಟ್ಟರೆ ಮಾತ್ರ ಸ್ವೀಕರಿಸುತ್ತೇವೆ ಎಂದು ಬಾಬಾ ಹೇಳಿಕೊಂಡಿದ್ದಾರೆ.
ಎಲ್ಲರೂ ಕೂಡಿ ಬಾಳಬೇಕು ಮತ್ತು ಹಂಚಿಕೊಂಡು ತಿನ್ನಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದು ಹೀಗಾಗಿಯೇ ಅವರ ಹೆಸರಿನಲ್ಲಿ ಕ್ಯಾಂಟೀನ್ ತೆರೆದಿರುವುದಾಗಿ ರಾಜು ಬಾಬಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್Uttar pradeshಉತ್ತರ ಪ್ರದೇಶRahul Gandhiರಾಹುಲ್ ಗಾಂಧಿpoor peopleಸನ್ಯಾಸಿcanteenಕ್ಯಾಂಟೀನ್ಬಡ ಜನರುSanyasi
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


