ಮಗನ ಸಾವಿನಿಂದ ಕಂಗೆಟ್ಟ ಮುಸ್ಲಿಂ ತಂದೆ ಹಿಂದೂ ಧರ್ಮಕ್ಕೆ ಮತಾಂತರ!
ಮಗನ ಕೊಲೆ ಪ್ರಕರಣವನ್ನು ಸ್ವಾಭಾವಿಕ ಸಾವು ಎಂದು ದಾಖಲಿಸಿದೆ ಪೊಲೀಸರ ವರ್ತನೆಯಿಂದ ಮನನೊಂದ ತಂದೆಯೊಬ್ಬ ತನ್ನ ಕುಟುಂಬದ ...

Published On :
ಬಾಘ್ಘತ್: ಮಗನ ಕೊಲೆ ಪ್ರಕರಣವನ್ನು ಸ್ವಾಭಾವಿಕ ಸಾವು ಎಂದು ದಾಖಲಿಸಿದೆ ಪೊಲೀಸರ ವರ್ತನೆಯಿಂದ ಮನನೊಂದ ತಂದೆಯೊಬ್ಬ ತನ್ನ ಕುಟುಂಬದ ಸದಸ್ಯರೊಂದಿಗೆ ಮುಸ್ಲಿಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಭದ್ರಕಾ ಗ್ರಾಮದ ನಿವಾಸಿಯಾದ ಅಖ್ತರ್ ಸೋಮವಾರ ತನ್ನ ಕುಟುಂಬದ 12 ಮಂದಿ ಸದಸ್ಯರೊಂದಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈ ಸಂಬಂಧ ಪ್ರಮಾಣ ಪತ್ರವನ್ನು ಉಪ ವಿಭಾಗಾಧಿಕಾರಿ ಅವರಿಗೆ ಸಲ್ಲಿಸಿದ್ದಾರೆ, ಜೊತೆಗೆ ತಾವು ಸ್ವ ಇಚ್ಚೆಯಿಂದ ಮತಾಂತರಗೊಂಡಿರುವುದಾಗಿ ತಿಳಿಸಿದ್ದಾರೆ.
ಪೊಲೀಸರು ತಮ್ಮ ಮಗನ ಸಾವಿನ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ತನಿಖೆ ಮಾಡಲಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೆಲ ತಿಂಗಳುಗಳ ಹಿಂದೆ ಅಖ್ತರ್ ಪುತ್ರ ಸಾವನ್ನಪ್ಪಿದ್ದ, ಆದರೆ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿಲ್ಲ, ಅಕ್ತರ್ ಪುತ್ರ ಗುಲ್ಷನ್ ಕೊಲೆಯಾಗಿತ್ತು, ಆದರೆ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು, ಈ ಸಂಬಂಧ ತಮಗೆ ಸಹಾಯ ಮಾಡುವಂತೆ ತಮ್ಮ ಸಮುದಾಯದವರನ್ನು ಕೇಳಿದ್ದರು. ಆದರೆ ಯಾರೋಬ್ಬರು ಅವರ ಸಹಾಯಕ್ಕೆ ಬರಲಿಲ್ಲ, ಹೀಗಾಗಿ ಅಕ್ತರ್ ಕುಟುಂಬಸ್ಥರು ತಮ್ಮ ಧರ್ಮವನ್ನು ಬದಲಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


