ದೇಶ

ಪೊಲೀಸರು ಮುಂದಿನಿಂದಲೇ ಆ್ಯಪಲ್ ಸಿಬ್ಬಂದಿ ವಿವೇಕ್ ಶೂಟ್ ಮಾಡಿದರು: ಪ್ರತ್ಯಕ್ಷದರ್ಶಿ

ಪೊಲೀಸ್ ಪೇದೆ ಪ್ರಶಾಂತ್ ಚೌಧರಿ ಅವರು ಆ್ಯಪಲ್‌ ಕಂಪೆನಿಯ ಎಕ್ಸಿಕ್ಯುಟಿವ್‌ ವಿವೇಕ್‌ ತಿವಾರಿ ಅವರನ್ನು ಮುಂದಿನಿಂದಲೇ ಶೂಟ್...

ಪೊಲೀಸರು ಮುಂದಿನಿಂದಲೇ ಆ್ಯಪಲ್ ಸಿಬ್ಬಂದಿ ವಿವೇಕ್ ಶೂಟ್ ಮಾಡಿದರು: ಪ್ರತ್ಯಕ್ಷದರ್ಶಿ
ಪ್ರತ್ಯಕ್ಷ ಸಾಕ್ಷಿ
Published On :
ಲಖನೌ: ಪೊಲೀಸ್ ಪೇದೆ ಪ್ರಶಾಂತ್ ಚೌಧರಿ ಅವರು ಆ್ಯಪಲ್‌ ಕಂಪೆನಿಯ ಎಕ್ಸಿಕ್ಯುಟಿವ್‌ ವಿವೇಕ್‌ ತಿವಾರಿ ಅವರನ್ನು ಮುಂದಿನಿಂದಲೇ ಶೂಟ್ ಮಾಡಿದರು ಎಂದು ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿರುವ ಯುವತಿ ಹೇಳಿದ್ದಾರೆ.
ಅಂದು ನಾವು ಮನೆಗೆ ಬರುತ್ತಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ಪೊಲೀಸರು(ಪ್ರಶಾಂತ್ ಮತ್ತು ಸಂದೀಪ್) ವಿವೇಕ್ ತಿವಾರಿಯನ್ನು ಎದುರುಗಡೆಯಿಂದಲೇ ಗುಂಡಿಕ್ಕಿ ಹತ್ಯೆ ಮಾಡಿದರು. ಇದನ್ನು ಕೆಲವು ಲಾರಿ ಚಾಲಕರು ಸಹ ನೋಡಿದರು. ಆದರೆ ಯಾರು ಸಹಾಯಕ್ಕೆ ಬರಲಿಲ್ಲ ಎಂದು ಪ್ರತ್ಯಕ್ಷದರ್ಶಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕಾರು ನಿಲ್ಲಿಸದ ಹಿನ್ನೆಲೆಯಲ್ಲಿ ಮತ್ತು ಆತ್ಮ ರಕ್ಷಣೆಗಾಗಿ ತಾನು ವಿವೇಕ್ ತಿವಾರಿ ಮೇಲೆ ಗುಂಡು ಹಾರಿಸಿರುವುದಾಗಿ ಪೊಲೀಸ್ ಪೇದೆ ಹೇಳಿದ್ದಾರೆ. 
ಇನ್ನು ವಿವೇಕ್‌ ತಿವಾರಿ ಮರಣೋತ್ತರ ವರದಿ ಬಂದಿದ್ದು ತಿವಾರಿ ಅವರ ಎಡ ಗದ್ದಕ್ಕೆ ತಗುಲಿರುವ ಗುಂಡೇಟಿನಿಂದಲೇ ಅವರ ಸಾವು ಸಂಭವಿಸಿರುವುದು ದೃಢಪಟ್ಟಿದೆ. 
ತಿವಾರಿ ಸಾವು ಆಕಸ್ಮಿಕ ಅವಘಡದಿಂದ ಆದುದಲ್ಲ, ಬದಲು ಗುಂಡೇಟಿನಿಂದ ಆಗಿರುವ ಮಾರಣಾಂತಿಕ ಗಾಯದಿಂದಲೇ ಸಂಭವಿಸಿದೆ ಎಂದು ಮರಣೋತ್ತರ ವರದಿಯಿಂದ ದೃಢ ಪಟ್ಟಿರುವುದಾಗಿ ಮೂಲಗಳು ತಿಳಿಸಿವೆ. 
ತಿವಾರಿಗೆ ಗುಂಡು ಹೊಡೆದ ಪ್ರಕರಣದಲ್ಲಿ , "ನನ್ನದೇನೂ ತಪ್ಪಿಲ್ಲ, ನಾನು ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಿದೆ, ಏಕೆಂದರೆ ಆತ ಮೂರು ಬಾರಿ  ತನ್ನ ಕಾರನ್ನು ನಮ್ಮ ಮೇಲೆ ಹರಿಸಲು ಯತ್ನಿಸಿದ ಎಂದು ಗೋಮತಿನಗರ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್ ಚೌಧುರಿ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.