ದೇಶ

ಇಮ್ರಾನ್ ಖಾನ್ ಚಪರಾಸಿ, ಪಾಕಿಸ್ತಾನವನ್ನು 4 ಭಾಗ ಮಾಡಿದರೆ ಸಮಸ್ಯೆ ಪರಿಹಾರ: ಸುಬ್ರಮಣಿಯನ್ ಸ್ವಾಮಿ

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಒಬ್ಬ ಜವಾನ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಲೇವಡಿ ಮಾಡಿದ್ದಾರೆ, ಇಸ್ಲಮಾಬಾದ್ ಅನ್ನು ...

ಇಮ್ರಾನ್ ಖಾನ್ ಚಪರಾಸಿ, ಪಾಕಿಸ್ತಾನವನ್ನು 4 ಭಾಗ ಮಾಡಿದರೆ ಸಮಸ್ಯೆ ಪರಿಹಾರ: ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ
Published On :
ಅಗರ್ತಲಾ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಒಬ್ಬ ಜವಾನ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಲೇವಡಿ ಮಾಡಿದ್ದಾರೆ, ಇಸ್ಲಮಾಬಾದ್ ಅನ್ನು ಮಿಲಿಟರಿ ಮತ್ತು ಐಎಸ್ ಐ ಹಾಗೂ ಭಯೋತ್ಪಾದಕರು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಪಾಕಿಸ್ತಾನವನ್ನು ಐಎಸ್ಐ  ಮತ್ತು ಭಯೋತ್ಪಾದಕರು ನಡೆಸುತ್ತಿದ್ದಾರೆ, ಇಮ್ರಾನ್ ಖಾನ್  ಜವಾನನಿಗಿಂತ ಭಿನ್ನವಲ್ಲ, ಅವರದ್ದು ಕೇವಲ ಜವಾನನ ಕೆಲಸ ಎಂದು ಸುದ್ದಿಗೋಷ್ಟಿಯಲ್ಲಿ ಸ್ವಾಮಿ ಆರೋಪಿಸಿದ್ದಾರೆ.
ಪಾಕಿಸ್ತಾನಕ್ಕ ಒಂದೇ ಒಂದು ಪರಿಹಾರವಿದೆ. ಬಲೋಚಿಗಳು ಪಾಕಿಸ್ತಾನದ ಭಾಗವಾಗಿರಲು ಇಷ್ಟವಿಲ್ಲ, ಸಿಂಧಿಗಳಿಗೂ ಪಾಕಿಸ್ತಾನದ ಜೊತೆ ಇರಲು ಇಷ್ಟವಿಲ್ಲ,  ಹೀಗಾಗಿ ಪಾಕಿಸ್ತಾನವನ್ನು ನಾಲ್ಕು ಭಾಗ ಮಾಡುವುದು ಸಮಸ್ಯೆಗೆ ಪರಿಹರವಾಗಿದೆ. 
ವಿಶ್ವಸಂಸ್ಥೆಯಲ್ಲಿ  ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದ ಬಗ್ಗೆ ಮಾತನಾಡಿ ತಮ್ಮ ಉಸಿರನ್ನು ವ್ಯರ್ಥ ಮಾಡುವ ಅವಶ್ಯಕತೆ ಇರುವುದಿಲ್ಲ, ಪಾಕಿಸ್ತಾನವನ್ನು ನಿರ್ಲಕ್ಷ್ಯ ಮಾಡಬೇಕು, ನಿಮ್ಮ ಪಾಕಿಸ್ತಾನವನ್ನು ಮಿಲಿಟರಿ ನಾಲ್ಕು ಭಾಗ ಮಾಡಲು ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಗಡಿಯಲ್ಲಿ ಭಯೋತ್ಪದಕತೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಶನಿವಾರ ಸುಷ್ಮಾ ಸ್ವರಾಜ್ ವಿಶ್ವಸಂಸ್ಥೆಯಲ್ಲಿ ಆರೋಪಿಸಿದ ನಂತರ ಸ್ವಾಮಿ ಈ ರೀತಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.