ರಾಹುಲ್ ಹೆಸರಿನ ಮುಂದೆ ಗಾಂಧಿ ಇರದಿದ್ದರೆ, ಅವರು ಜಿಲ್ಲಾಧ್ಯಕ್ಷ ಸಹ ಆಗುತ್ತಿರಲಿಲ್ಲ: ಸಚಿವ ರವಿಶಂಕರ್ ಪ್ರಸಾದ್
ರಾಹುಲ್ ಹೆಸರಿನ ಮುಂದೆ ಗಾಂಧಿ ಎಂಬ ಪದ ಇರದೇ ಇದ್ದರೆ ಜಿಲ್ಲಾಧ್ಯಕ್ಷರಾಗಿಯೂ ಕೂಡ ಆಯ್ಕೆಯಾಗುತ್ತಿರಲಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.

Published On :
ನವದೆಹಲಿ: ರಾಹುಲ್ ಹೆಸರಿನ ಮುಂದೆ ಗಾಂಧಿ ಎಂಬ ಪದ ಇರದೇ ಇದ್ದರೆ ಜಿಲ್ಲಾಧ್ಯಕ್ಷರಾಗಿಯೂ ಕೂಡ ಆಯ್ಕೆಯಾಗುತ್ತಿರಲಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ಪಕ್ಷ ವಂಶ ರಾಜಕೀಯ ಹಾಗೂ ಸ್ವಜನಪಕ್ಷಪಾತ ಪಕ್ಷ. ರಾಹುಲ್ ಹೆಸರಿನ ಮುಂದೆ ಗಾಂಧಿ ಎಂಬ ಹೆಸರು ಇರದೇ ಹೋಗಿದ್ದರೆ, ಅವರು ಕಾಂಗ್ರೆಸ್ನ ಜಿಲ್ಲಾಧ್ಯಕ್ಷರು ಕೂಡ ಆಗುತ್ತಿರಲಿಲ್ಲ. ಕಾಂಗ್ರೆಸ್ ಒಂದು ಹಳೆಯ ಪಕ್ಷ. ಸದ್ಯ ರಾಹುಲ್ ಗಾಂಧಿ ಅವರು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ. ಜವಾಹರಲಾಲ್ ನೆಹರು ಮತ್ತು ಸರ್ದಾರ್ ಪಟೇಲ್ರಂತಹ ಹಲವು ಪ್ರಮುಖ ವ್ಯಕ್ತಿಗಳಿಂದ ಪಕ್ಷ ಎತ್ತರಕ್ಕೆ ತಲುಪಿದೆ. ಆದರೆ, ಒಂದಂತೂ ಖಚಿತಪಡಿಸುತ್ತೇನೆ. ಒಂದು ವೇಳೆ ರಾಹುಲ್ ಗಾಂಧಿ ಕುಟುಂಬದಲ್ಲಿ ಹುಟ್ಟಿರದಿದ್ದರೆ, ಅವರು ಕಾಂಗ್ರೆಸ್ನ ಜಿಲ್ಲಾಧ್ಯಕ್ಷರೂ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಗಾಂಧಿ ಗೋತ್ರ ಬಹಿರಂಗ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವನ್ನು ಸಾರ್ವಜನಿಕ ಕ್ಷೇತ್ರಕ್ಕೆ ಎಳೆತಂದಿರುವುದರಿಂದ ಬಿಜೆಪಿಯು ಕೂಡ ಇದನ್ನು ಚರ್ಚಿಸುತ್ತಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ರಾಜಸ್ಥಾನದಲ್ಲಿ ರಾಹುಲ್ ಕೌಲ ಬ್ರಾಹ್ಮಣನಾದರೆ, ಗುಜರಾತ್ ಗೆ ಭೇಟಿ ನೀಡಿದಾಗ ಅಲ್ಲಿ ಶಿವಭಕ್ತನಾಗುತ್ತಾರೆ. ಹೌದು, ಎಲ್ಲ ನಾಯಕರಿಗೂ ಅವರವರ ನಂಬಿಕೆಯನ್ನು ಹಿಂಬಾಲಿಸುವ ಸ್ವತಂತ್ರವಿದೆ. ಆದರೆ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಜವಹರ್ ಲಾಲ್ ನೆಹರೂ ಈ ರೀತಿ ಮಾಡಿದ್ದನ್ನು ನೀವು ಎಂದಾದರೂ ಕೇಳಿದ್ದೀರಾ? ನಿಜವಾದ ಸಮಸ್ಯೆಗಳ ಬಗ್ಗೆ ತಿಳಿಯದೇ ಮತ್ತು ಅದರ ಬಗ್ಗೆ ಮಾತನಾಡಲು ಸಾಧ್ಯವಾಗದೇ ರಾಹುಲ್ ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ರವಿಶಂಕರ್ ಪ್ರಸಾದ್ ಟೀಕಿಸಿದರು.
ಕಾಂಗ್ರೆಸ್ ಪಕ್ಷ ವಂಶ ರಾಜಕೀಯದಲ್ಲಿ ಸಿಲುಕಿಕೊಂಡಿದೆ. ಇತ್ತೀಚೆಗೆ ಕಾಂಗ್ರೆಸ್ ನಾಯಕರೊಬ್ಬರು ನಾವು ರಾಹುಲು ಕುಟುಂಬದ ಐದು ತಲೆಮಾರುಗಳ ಬಗ್ಗೆ ತಿಳಿದಿದ್ದೇವೆ. ಆದರೆ, ಮೋದಿ ಬಗ್ಗೆ ಅಲ್ಲ ಎಂಬ ಹೇಳಿಕೆ ಅವರ ನಂಬಿಕೆಯನ್ನು ತೋರಿಸುತ್ತದೆ. ಒಂದು ಸರ್ಕಾರವನ್ನು ಒಂದು ಕುಟುಂಬದಿಂದ ನಡೆಸಬಹುದೇ? ಬಡವರು ಮತ್ತು ನಿರಾಶ್ರಿತರು ಕೂಡ ಸರ್ಕಾರವನ್ನು ಪ್ರವೇಶಿಸಬಹುದಲ್ಲವೇ ಎಂದು ಪ್ರಸಾದ್ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿCongressಕಾಂಗ್ರೆಸ್New DelhibjpಬಿಜೆಪಿRahul Gandhiರಾಹುಲ್ ಗಾಂಧಿRavi Shankar Prasadರವಿಶಂಕರ್ ಪ್ರಸಾದ್Indian politicsಭಾರತೀಯ ರಾಜಕೀಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


