ದೇಶ

ಪೋರ್ನ್ ವ್ಯಸನಿ ನೌಕಾಪಡೆ ಅಧಿಕಾರಿ ತನ್ನ ಪತ್ನಿಯ ಆಕ್ಷೇಪಾರ್ಹ ಫೋಟೊಗಳನ್ನು ಅಪ್ ಲೋಡ್ ಮಾಡಿದ!

ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವ ಚಟಕ್ಕೆ ಬಿದ್ದಿದ್ದ 39 ವರ್ಷದ ನೌಕಾಪಡೆ ಅಧಿಕಾರಿ ತನ್ನ ಪತ್ನಿಯ ಆಕ್ಷೇಪಾರ್ಹ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾನೆ!

ಪೋರ್ನ್ ವ್ಯಸನಿ ನೌಕಾಪಡೆ ಅಧಿಕಾರಿ ತನ್ನ ಪತ್ನಿಯ ಆಕ್ಷೇಪಾರ್ಹ ಫೋಟೊಗಳನ್ನು ಅಪ್ ಲೋಡ್ ಮಾಡಿದ!
ಪೋರ್ನ್ ವ್ಯಸನಿ ನೌಕಾಪಡೆ ಅಧಿಕಾರಿ ತನ್ನ ಪತ್ನಿಯ ಆಕ್ಷೇಪಾರ್ಹ ಫೋಟೊಗಳನ್ನು ಅಪ್ ಲೋಡ್ ಮಾಡಿದ!
Published On :
ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವ ಚಟಕ್ಕೆ ಬಿದ್ದಿದ್ದ 39 ವರ್ಷದ ನೌಕಾಪಡೆ ಅಧಿಕಾರಿ ತನ್ನ ಪತ್ನಿಯ ಆಕ್ಷೇಪಾರ್ಹ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾನೆ! 
ತನ್ನ ಪತ್ನಿಯ ಫೋಟೋಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ಮಾರ್ಫ್ ಮಾಡಿ ಆನ್ ಲೈನ್ ಫೋಟೊ ಆಪ್ ನಲ್ಲಿ ಅಪ್ ಲೋಡ್ ಮಾಡಿದ್ದಾನೆ. ಸಂತ್ರಸ್ತೆ ಈ ಬಗ್ಗೆ ದೂರು ದಾಖಲಿಸಿದ್ದು, "ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನನ್ನ ಪತಿ ಪೋರ್ನ್ ವೀಕ್ಷಣೆ ಚಟ ಹೊಂದಿದ್ದ ಎಂದು ದೂರಿನಲ್ಲಿ ಹೇಳಿದ್ದಾರೆ. 
ಸಂತ್ರಸ್ತ ಮಹಿಳೆ ಸಹ ಸೇನೆಯಲ್ಲಿ ಕಾರ್ಯನಿರ್ವಹಣೆ ಮಾಡಿ ರಾಜೀನಾಮೆ ನೀಡಿರುವ ಅಧಿಕಾರಿಯಾಗಿದ್ದು, ತಾನು ಹಾಗೂ ಕುಟುಂಬದ ಸದಸ್ಯರು ಎಷ್ಟೇ ಪ್ರಯತ್ನಿಸಿದರೂ ಪತಿಯ ಪೋರ್ನ್ ವೀಕ್ಷಣೆ ಚಟವನ್ನು ತಡೆಯಲು ಸಾಧ್ಯವಾಗಲಿಲ್ಲ. ಇದರಿಂದ ಬೇಸತ್ತು ಮಕ್ಕಳೊಂದಿಗೆ ಪೋಷಕರ ಮನೆಯಲ್ಲಿರುವುದಾಗಿ ನೌಕಾ ಪಡೆ ಅಧಿಕಾರಿಯ ಪತ್ನಿ ಹೇಳಿದ್ದಾರೆ. 
ಪತಿಯ ವರ್ತನೆಯಿಂದ ಬೇಸತ್ತಿರುವ ಮಹಿಳೆ ಪುಣೆಯಲ್ಲಿರುವ ತವರು ಮನೆಗೆ ಬಂದಿದ್ದು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ ಪತಿಯ ಮೊಬೈಲ್ ನ್ನೂ ತನ್ನೊಂದಿಗೆ ತಂದಿದ್ದರು. ಪತಿಯ ಮೊಬೈಲ್ ನಲ್ಲಿ ಮಾರ್ಫ್ ಆಗಿರುವ ತನ್ನ ಫೋಟೊಗಳು ಆನ್ ಲೈನ್ ಫೋಟೋ ಆಪ್ ಗೆ ಅಪ್ ಲೋಡ್ ಆಗಿರುವುದನ್ನು ಗಮನಿಸಿದ್ದಾರೆ. ಈ ಬಗ್ಗೆಯೂ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 
ತನ್ನ ಪತ್ನಿಯದ್ದಷ್ಟೇ ಅಲ್ಲದೇ ತನ್ನ ಜೊತೆ ಕೆಲಸ ಮಾಡುವ ಸಹೋದ್ಯೋಗಿ ಪತ್ನಿಯ ಫೋಟೋವನ್ನು ಆಕ್ಷೇಪಾರ್ಹ ರೀತಿಯಲ್ಲಿ ಮಾರ್ಫ್ ಮಾಡಿದ್ದು, ಇನ್ನೂ ಹಲವು ಮಹಿಳೆಯರ ಫೋಟೊಗಳಿದ್ದವು, ಅಷ್ಟೇ ಅಲ್ಲದೇ ಸಹೋದ್ಯೋಗಿ ಪತ್ನಿಯೊಂದಿಗೆ ಸಂಬಂಧವನ್ನೂ ಹೊಂದಿದ್ದರು ಎಂದು ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆಯ ದೂರನ್ನಾಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,  ನೌಕಾಪಡೆ ಅಧಿಕಾರಿಯನ್ನು ವಿಚಾರಣೆಗೊಳಪಡಿಸುವುದಕ್ಕೆ ನೌಕಾಪಡೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.