ಜಿಡಿಪಿ ವಿವಾದ: ಚಿದಂಬರಂ ಸವಾಲು ಸ್ವೀಕರಿಸಿದ ನೀತಿ ಆಯೋಗದ ಉಪಾಧ್ಯಕ್ಷ
ಪರಿಷ್ಕೃತ ಜಿಡಿಪಿಗೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರ ಸವಾಲನ್ನು ಸ್ವೀಕರಿಸಿದ ನೀತಿ...

Published On :
ನವದೆಹಲಿ: ಪರಿಷ್ಕೃತ ಜಿಡಿಪಿ ಅಂಕಿ ಅಂಶಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರ ಸವಾಲನ್ನು ಸ್ವೀಕರಿಸಿದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು, ಈ ಸಂಬಂಧ ತಾವೂ ಚರ್ಚೆಗೆ ಸಿದ್ಧ ಎಂದು ಗುರುವಾರ ಹೇಳಿದ್ದಾರೆ.
ಚಿದಂಬರಂ ಅವರೇ ನಾನು ನಿಮ್ಮ ಸವಾಲು ಸ್ವೀಕರಿಸಿದ್ದೇನೆ. ಹಿಂದಿನ ಮಾಹಿತಿಯನ್ನು ವಿಭಜಿಸಿ ಚರ್ಚಿಸೊಣ. ಈ ಸಂಬಂಧ ನಾನು ನಿನ್ನೆ ಮೂರು ಗಂಟೆಗಳ ಕಾಲ ವಿಸ್ತೃತವಾಗಿ ಸಂದರ್ಶನ ನೀಡಿದ್ದೇನೆ. ಆದರೂ ನಾನು ಮಾಧ್ಯಮಗಳಿಗೆ ಪ್ರಶ್ನಿಸಬೇಡಿ ಎಂದು ಹೇಳುವುದು ಅಸಹ್ಯಕರವಾಗಿದೆ. ನಿಮ್ಮ ಬಳಿ ಹೆಚ್ಚು ಸಮಂಜಸವಾದ ಮಾಹಿತಿ ಇದ್ದರೆ ನೀಡಿ ಎಂದು ರಾವ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.
ಹೊಸ ಜಿಡಿಪಿ ಮಾಹಿತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಚಿದಂಬರಂ ಅವರು, ಪರಿಷ್ಕೃತ ಜಿಡಿಪಿ ಸಂಖ್ಯೆಗಳು ಒಂದು ಜೋಕ್. ಅದೊಂದು ಕೆಟ್ಟ ಜೋಕ್. ಕೈಚಳಕದ ಕೆಲಸ ಎಂದು ಟ್ವೀಟ್ ಮಾಡಿದ್ದರು. ಅಲ್ಲದೆ ಈ ಬಗ್ಗೆ ಚರ್ಚೆಗೆ ಕುಮಾರ್ ಒಪ್ಪಿಕೊಳ್ಳುತ್ತಾರಾ ಎಂದು ಸವಾಲು ಹಾಕಿದ್ದರು.
ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರಾಜೀವ್ ಕುಮಾರ್ ಅವರು, ಹೊಸ ಲೆಕ್ಕಾಚಾರ ಪದ್ಧತಿಯು ಅತ್ಯಂತ ಸುಧಾರಿತವಾಗಿದ್ದು, ವಿಶ್ವಸಂಸ್ಥೆಯ ಸ್ಟ್ಯಾಂಡರ್ಡ್ ನ್ಯಾಶನಲ್ ಅಕೌಂಟ್‌ಗೆ ಸಮವಾಗಿದೆ. ಹಳೆಯ ಲೆಕ್ಕಾಚಾರಗಳ ಸಂಕೀರ್ಣ ಸ್ವರೂಪವನ್ನು ಬದಲಿಸಿದೆ ಎಂದು ಸಮರ್ಥಿಸಿಕೊಂಡಿದ್ದರು.
ಎಸ್ ಒ ಬಿಡುಗಡೆ ಮಾಡಿರುವ 2005-06 ರಿಂದ 2017-18ರವರೆಗಿನ ಪರಿಷ್ಕೃತ ಜಿಡಿಪಿ ದರ ಪಟ್ಟಿಯಲ್ಲಿ ಯುಪಿಎ ಆಡಳಿತದ ಸರಾಸರಿ ಜಿಡಿಪಿ ದರ ಶೇ.6.7 ಇದ್ದರೆ ಎನ್ಡಿಎ ಸರ್ಕಾರದ್ದು ಶೇ. 7.35 ರಷ್ಟಿದೆ ಎಂದು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


