ಎಸ್ಪಿ ಮಾಜಿ ನಾಯಕ ಅಮರ್ ಸಿಂಗ್ ರಿಂದ ಆರ್ ಎಸ್ ಎಸ್ ಗೆ ಕೋಟ್ಯಂತರ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿ ದಾನ!
ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ತನ್ನ ಕೋಟ್ಯಂತರ ಮೌಲ್ಯದ ಪಿತ್ರಾರ್ಜಿತ ಆಸ್ತಿಯನ್ನು ಅಜಂಗಢದ ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ಸೇರಿದ ಸೇವಾ ಭಾರತ ಸಂಸ್ಥೆಗೆ ದಾನ ಮಾಡಿದ್ದಾರೆ.

ಲಖನೌ: ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ತನ್ನ ಕೋಟ್ಯಂತರ ರೂ.ಮೌಲ್ಯದ ಪಿತ್ರಾರ್ಜಿತ ಆಸ್ತಿಯನ್ನು ಅಜಂಗಢದ ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ಸೇರಿದ ಸೇವಾ ಭಾರತ ಸಂಸ್ಥೆಗೆ ದಾನ ಮಾಡಿದ್ದಾರೆ.
ಎಸ್ಪಿ ಪಕ್ಷದ ಮಾಜಿ ಕಾರ್ಯದರ್ಶಿ ಅಮರ್ ಸಿಂಗ್ ಅಜಂಗಢದ ತರ್ವಾನ್ ಬಳಿಯಲ್ಲಿನ 10 ಕೋಟಿ. ರೂ. ಮೌಲ್ಯದ ಭೂಮಿ, 4 ಕೋಟಿ ಮೌಲ್ಯದ ಪೂರ್ವಜರ ಕಾಲದ ಮನೆ ಸೇರಿದಂತೆ 15 ಕೋಟಿ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿಯನ್ನು ಸೇವಾ ಭಾರತಿ ಸಂಸ್ಥೆಗೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಆರ್ ಎಸ್ ಎಸ್ ಮೂಲಕ ಬಿಜೆಪಿಗೆ ಸೇರಿಕೊಳ್ಳಲು ಅಮರ್ ಸಿಂಗ್ ದಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದಿರುವ ಅಮರ್ ಸಿಂಗ್ , ಸಮಾಜ ಸೇವೆ ಹಾಗೂ ತಮ್ಮ ಪೂರ್ವಜರ ನೆನಪಿನಲ್ಲಿ ಆಸ್ತಿ ದಾನ ಮಾಡಿರುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


