ರಾಹುಲ್ ತಮ್ಮ ಗುರುತನ್ನು ಮರೆಸಿ ಸ್ವತಃ ಹಾಸ್ಯ ಮಾಡಿಕೊಳ್ಳುತ್ತಿದ್ದಾರೆ: ಗೋತ್ರ ಪ್ರವರ ಕುರಿತು ಬಿಜೆಪಿ ವ್ಯಂಗ್ಯ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಾನು "ಕಾಶ್ಮೀಇ ಬ್ರಾಹ್ಮಣ" ನನ್ನದು "ದತ್ತಾತ್ರೇಯ ಗೋತ್ರ": ಎಂದು ಹೇಳಿಕೊಂಡಿರುವುದು ಹಾಸ್ಯಾಸ್ಪದ. ರಾಹುಲ್ "ಗೋತ್ರ" ಹೇಳುವ ಮೂಲಕ ಅವರು....

Published On :
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಾನು "ಕಾಶ್ಮೀಇ ಬ್ರಾಹ್ಮಣ" ನನ್ನದು "ದತ್ತಾತ್ರೇಯ ಗೋತ್ರ": ಎಂದು ಹೇಳಿಕೊಂಡಿರುವುದು ಹಾಸ್ಯಾಸ್ಪದ. ರಾಹುಲ್ "ಗೋತ್ರ" ಹೇಳುವ ಮೂಲಕ ಅವರು ತಮ್ಮ ಗುರುತನ್ನು ಮರೆ ಮಾಚುತ್ತಿದ್ದಾರೆ ಹಾಗೂ ಅವರು ತಮ್ಮನ್ನು ತಾವೇ ಹಾಸ್ಯ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ದೂರಿದೆ.
ಬಿಜೆಪಿ ವಕ್ತಾರ ಜಿ.ವಿ.ಎಲ್. ನರಸಿಂಹ ರಾವ್ ಮಾತನಾಡಿ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ವೇಳೆ ಕಾಂಗ್ರೆಸ್ ಜಾತಿ, ಸಾಮುದಾಯಿಕ ನಿರೂಪಣೆ ಮೂಲಕ ಜನರನ್ನು ಮೋಸಗೊಳಿಸಲು ಪ್ರಯತ್ನಿಸಿದೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ "ಗೋತ್ರ" ಹೇಳಿಕೊಳ್ಳುವ ಮೂಲಕ ತಮ್ಮ ನೈಜ ಗುರುತನ್ನು ಮರೆಸುತ್ತಿದ್ದಾರೆ, ತಮ್ಮನ್ನು ಸ್ವತ ಹಾಸ್ಯ ಮಾಡಿಕೊಳ್ಳುತ್ತಿದ್ದಾರೆ" ಎಂದರು.
"ಚುನಾವಣಾ ಋತುವಿನಲ್ಲಿ, ಅಂತಹ ಸಿನಿಕತನದ ಪ್ರಯತ್ನಗಳು ಕಾಂಗ್ರೆಸ್ ಪಕ್ಷದ ಬೌದ್ಧಿಕ ದಿವಾಳಿತನದ ಬಗ್ಗೆ ಮತ್ತು ಬಿಜೆಪಿಯ ಅಭಿವೃದ್ದಿ ಅಜೆಂಡಾದೊಡನೆ ತಮ್ಮ ಪಕ್ಷದ ಸರ್ಕಾರಗಳು ತೊಡಗಿಸಿಕೊಳ್ಳುವುದಕ್ಕೆ ವಿಫಲವಾಗಿರುವುದನ್ನು ತೋರಿಸುತ್ತದೆ"ರಾವ್ ಹೇಳಿದ್ದಾರೆ.
ರಾಜಸ್ಥಾನದ ರ್ಯಾಲಿಗಳಿಗೆ ತೆರಳುವ ಮುನ್ನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಜ್ಮೀರ್ ದರ್ಗಾ ಹಾಗೂ ಪುಇಷ್ಕರದ ಪ್ರಸಿದ್ದ ಬ್ರಹ್ಮ ದೇವಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ತಾನು ಕಾಶ್ಮೀರದ ಕೌಲ್ ಬ್ರಾಹ್ಮಣ, ದತ್ತಾತ್ರೇಯ ಗೋತ್ರಕ್ಕೆ ಸೇರಿದವರೆಂದು ಹೇಳಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bharatiya Janata PartyRahul Gandhiರಾಹುಲ್ ಗಾಂಧಿಭಾರತೀಯ ಜನತಾ ಪಕ್ಷGVL Narasimha RaoGotraಗೋತ್ರಜಿ.ವಿ.ಎಲ್ ನರಸಿಂಹ ರಾವ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


