ರಾಹುಲ್ ಗಾಂಧಿ ಕಾಶ್ಮೀರಿ ಬ್ರಾಹ್ಮಣ, 'ದತ್ತಾತ್ರೆಯ' ಗೋತ್ರ: ದೇವಸ್ಥಾನದ ಪೂಜಾರಿ ಹೇಳಿಕೆ
ನಾನು ಕೌಲ ಬ್ರಾಹ್ಮಣ, ನನ್ನದು ದತ್ತಾತ್ರೆಯ ಗೋತ್ರಾ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

Published On :
ಜೈಪುರ: ನಾನು ಕೌಲ ಬ್ರಾಹ್ಮಣ, ನನ್ನದು ದತ್ತಾತ್ರೆಯ ಗೋತ್ರ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ವಿವಿಧ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ಪರಸ್ಪರ ವಾಗ್ದಾಳಿ ನಡೆಸುತ್ತಿವೆ. ಏತನ್ಮಧ್ಯೆ ಬಿಜೆಪಿ ನಾಯಕ ರಾಹುಲ್ ಗಾಂಧಿಯ ಕುಲಗೋತ್ರ ವಾಗ್ದಾಳಿಗೆ ಇದೀಗ ರಾಹುಲ್ ಗಾಂಧಿ ಉತ್ತರ ನೀಡಿದ್ದಾರೆ.
ರಾಜಸ್ಥಾನದ ಪುಷ್ಕರ ನಗರದಲ್ಲಿ ಬ್ರಹ್ಮ ದೇವಾಲಯಕ್ಕೆ ರಾಹುಲ್ ಭೇಟಿ ನೀಡಿದ್ದ ವೇಳೆ ಅಲ್ಲಿನ ಅರ್ಚಕರಿಗೆ ತಮ್ಮ ಕುಲ ಗೋತ್ರಗಳ ಬಗ್ಗೆ ಮಾಹಿತಿ ನೀಡಿದ್ದು, ತನ್ನದು ದತ್ತಾತ್ರೇಯ ಗೋತ್ರ ಎಂದೂ, ತಾನು ಕೌಲ ಬ್ರಾಹ್ಮಣಕ್ಕೆ ಸೇರಿದವನೆಂದೂ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ. ಪೂಜೆಯ ಬಳಿಕ, ಈ ಬಗ್ಗೆ ಮಾತನಾಡಿರುವ ಬ್ರಹ್ಮ ದೇವಾಲಯದ ಅರ್ಚಕರು ರಾಹುಲ್ ಗಾಂಧಿ ಅವರು ತಮ್ಮದು ದತ್ತಾತ್ರೇಯ ಗೋತ್ರ, ತಮ್ಮ ಕುಟುಂಬ ಕಾಶ್ಮೀರಿ ಬ್ರಾಹ್ಮಣ ಪಂಗಡಕ್ಕೆ ಸೇರಿದ್ದೆಂದು ಹೇಳಿರುವುದಾಗಿ ತಿಳಿಸಿದರು.
ಕೌಲ್ ಎಂಬುದು ಸಂಸ್ಕೃತದ ಕುಲ್ ಪದವಾಗಿದ್ದು, ಕಾಶ್ಮೀರಿ ಪಂಡಿತರು ಬಳಸುವ ಉಪನಾಮವಾಗಿದೆ. ಮೋತಿಲಾಲ್ ನೆಹರು, ಜವಹಾರಲಾಲ್ ನೆಹರು, ರಾಜೀವ್ ಗಾಂಧಿ, ರಾಹುಲ್ ಗಾಂಧಿ ಇವರೆಲ್ಲ ಅಲಹಾಬಾದ್ ನಲ್ಲಿ ನೆಲೆಸಿದ್ದ ಕಾಶ್ಮೀರಿ ಪಂಡಿತರು ಎಂದು ಅರ್ಚಕರು ಹೇಳಿದ್ದಾರೆ.
ಒಟ್ಟಾರೆ ಈಗ ರಾಹುಲ್ ಗಾಂಧಿ ಕುಲ-ಗೋತ್ರಗಳ ವಿಚಾರ ವ್ಯಾಪಕ ವೈರಲ್ ಆಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Rahul Gandhiರಾಹುಲ್ ಗಾಂಧಿJaipurಜೈಪುರರಾಜಸ್ತಾನRajastanDattatreyaKashmiri Brahminದತ್ತಾತ್ರೆಯಕಾಶ್ಮೀರಿ ಬ್ರಾಹ್ಮಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


