ದೇಶ

ಛತ್ತೀಸ್ ಗಡ: ಎನ್ ಕೌಂಟರ್ ನಲ್ಲಿ 8 ನಕ್ಸಲೀಯರ ಹತ್ಯೆ,ಇಬ್ಬರು ಪೊಲೀಸರು ಹುತಾತ್ಮ

ಛತ್ತೀಸ್ ಗಡದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ನಕ್ಸಲೀಯರ ನಡುವೆ ಇಂದು ನಡೆದ ಗುಂಡಿನ ಕಾಳಗದಲ್ಲಿ 8 ನಕ್ಸಲೀಯರು ಹತ್ಯೆಯಾಗಿದ್ದು, ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.

ಛತ್ತೀಸ್ ಗಡ: ಎನ್ ಕೌಂಟರ್ ನಲ್ಲಿ 8 ನಕ್ಸಲೀಯರ ಹತ್ಯೆ,ಇಬ್ಬರು ಪೊಲೀಸರು ಹುತಾತ್ಮ
ಸಾಂದರ್ಭಿಕ ಚಿತ್ರ
Published On :

ಸುಕ್ಮಾ: ಛತ್ತೀಸ್ ಗಡದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ನಕ್ಸಲೀಯರ ನಡುವೆ  ಇಂದು ನಡೆದ ಗುಂಡಿನ ಕಾಳಗದಲ್ಲಿ 8 ನಕ್ಸಲೀಯರು ಹತ್ಯೆಯಾಗಿದ್ದು, ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.

ಭದ್ರತಾ ಪಡೆಗಳು ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ತೆಲಂಗಾಣ ಗಡಿ ಭಾಗ ಕಿಸ್ತಾರಾಮ್  ಅರಣ್ಯ ಪ್ರದೇಶಕ್ಕೆ ಹೋಗಿದ್ದಾಗ ಗುಂಡಿನ ಕಾಳಗ ನಡೆದಿದೆ ಎಂದು ಸುಕ್ಮಾ ಪೊಲೀಸ್ ಸೂಪರಿಟೆಂಡೆಂಟ್  ಅಭಿಷೇಖ್ ಮೀನಾ ಹೇಳಿದ್ದಾರೆ.

ಎನ್ ಕೌಂಟರ್ ನಡೆದ ಪ್ರದೇಶದಲ್ಲಿ 8 ನಕ್ಸಲೀಯರ ಮೃತದೇಹಗಳು ಪತ್ತೆಯಾಗಿವೆ. ಗುಂಡಿನ ದಾಳಿ ವೇಳೆಯಲ್ಲಿ ಇಬ್ಬರು ಜಿಲ್ಲಾ ಮೀಸಲು ಭದ್ರತಾ ಸಿಬ್ಬಂದಿಯೂ ಮೃತಪಟ್ಟಿದ್ದಾರೆ ಎಂದು ಅವರು  ತಿಳಿಸಿದ್ದಾರೆ.

 ಎನ್ ಕೌಂಟರ್   ಪ್ರಗತಿಯಲ್ಲಿದ್ದು,  ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ. ಹೆಚ್ಚಿನ ತುಕಡಿಗಳನ್ನು ರವಾನಿಸಲಾಗಿದೆ ಎಂದು  ಎಸ್ ಪಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.