ಅರುಣಾಚಲ ಪ್ರದೇಶ: ಸಜೀವ ಶಲ್ ಸ್ಪೋಟಗೊಂಡು ಮೂರು ಮಕ್ಕಳು ಸಾವು
ಸಜೀವ ಶೆಲ್ ಸ್ಪೋಟಗೊಂಡ ಪರಿಣಾಮ ಕನಿಷ್ಟ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆ ಚಿರಾಂಗ್ ಗ್ರಾಮದಲ್ಲಿ ನಡೆದಿದೆ. ಸಾವನ್ನಪ್ಪಿದ ಮೂರು ಮಕ್ಕಳು 2-10 ವರ್ಷ ಒಳಗಿನವರು ಎನ್ನಲಾಗಿದೆ.

Published On :
ಇಟಾನಗರ: ಸಜೀವ ಶೆಲ್ ಸ್ಪೋಟಗೊಂಡ ಪರಿಣಾಮ ಕನಿಷ್ಟ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆ ಚಿರಾಂಗ್ ಗ್ರಾಮದಲ್ಲಿ ನಡೆದಿದೆ. ಸಾವನ್ನಪ್ಪಿದ ಮೂರು ಮಕ್ಕಳು 2-10 ವರ್ಷ ಒಳಗಿನವರು ಎನ್ನಲಾಗಿದೆ.
ಇಬ್ಬರು ಬಾಲಕಿಯರು ಸೇರಿ ಮೂರು ಮಕ್ಕಳು ಸಜೀವ ಶೆಲ್ (ಸ್ಪೋಟಕ) ದೊಡನೆ ಆಟವಾಡುತ್ತಿದ್ದರು ಇದನ್ನು ಅಅವರು ತಮ್ಮ ಪೋಷಕರಿಂದಲೇ ಪಡೆದಿದ್ದರು ಎನ್ನಲಾಗಿದೆ.
ಭಾರತೀಯ ಸೇನೆಯ ಫೈರಿಂಗ್ ರೇಂಜ್ ನಲ್ಲಿ ಬಳಸಲಾಗುವ ಶೆಲ್ ಇದು ಎನ್ನಲಾಗಿದ್ದು ಒಮ್ಮೆ ಬಳಕೆಯಾಗಿದ್ದ ಶೆಲ್ ಅನ್ನು ಸ್ಥಳೀಯ ಗ್ರಾಮನಿವಾಸಿಗಳು ಸಂಗ್ರಹಿಸಿ ಅದರಲ್ಲಿನ ಅಲ್ಯುಮಿನಿಯಂ ಅನ್ನು ಕರಗಿಸುತ್ತಿದ್ದರು ಎಂದು ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಮೃತ ಮಕ್ಕಳನ್ನು ಯುಮನ್ ಕ್ರಾಂಗ್ (2) ರಿಯಾ ಕ್ರಾಂಗ್ ((8) ಮತ್ತು ಅನಿಶಾ ಕ್ರಾಂಗ್ (10) ಎಂದು ಗುರುತಿಸಲಾಗಿದೆ.
ಘಟನೆಯ ಕುರಿತು ಮುಖ್ಯಮಂತ್ರಿ ಪೆಮಾ ಖಂಡು ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಮೃತ ಮಕ್ಕಳ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಅವರು ಹೇಳಿದ್ದಾರೆ. ಇದೇವೇಳೆ ಸೇನಾ ಶಿಬಿರಗಳು, ಸೈನಿಕರು ಅಭ್ಯಾಸ ನಡೆಸುವ ಸ್ಥಳಗಳಿಗೆ ಗ್ರಾಮಸ್ಥರು ತೆರಳಬಾರದು ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


