ದೇಶ

ಮಂದಿರ ನಿರ್ಮಾಣ ಕುರಿತು 'ಕುಂಭಕರ್ಣ'ನನ್ನು ಎಚ್ಚರಿಸಲು ಅಯೋಧ್ಯೆಗೆ ಬಂದಿದ್ದೇವೆ: ಉದ್ಧವ್ ಠಾಕ್ರೆ

ಮಂದಿರ ನಿರ್ಮಾಣ ಕುರಿತು ಕುಂಭಕರ್ಣನನ್ನು ಎಚ್ಚರಿಸಲು ಅಯೋಧ್ಯೆಗೆ ಬಂದಿರುವುದಾಗಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಮಂದಿರ ನಿರ್ಮಾಣ ಕುರಿತು 'ಕುಂಭಕರ್ಣ'ನನ್ನು ಎಚ್ಚರಿಸಲು ಅಯೋಧ್ಯೆಗೆ ಬಂದಿದ್ದೇವೆ: ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Published On :

ಅಯೋಧ್ಯೆ :  ಮಂದಿರ ನಿರ್ಮಾಣ ಕುರಿತು ಕುಂಭಕರ್ಣನನ್ನು ಎಚ್ಚರಿಸಲು ಅಯೋಧ್ಯೆಗೆ ಬಂದಿರುವುದಾಗಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ  ಹೇಳಿದ್ದಾರೆ.

ತಮ್ಮ  ಪತ್ನಿ  ರಶ್ಮಿ ಹಾಗೂ ಮಗ ಅದಿತ್ಯನೊಂದಿಗೆ  ಅಯೋಧ್ಯೆಗೆ ಎರಡು ದಿನಗಳ ಭೇಟಿ ನೀಡಿರುವ ಉದ್ಧವ್ ಠಾಕ್ರೆ,  ಗಾಢ ನಿದ್ರೆಯಲ್ಲಿರುವ ಕುಂಭಕರ್ಣನನ್ನು ಎಚ್ಚರಿಸಲು ಬಂದಿರುವುದಾಗಿ ಹೇಳುವ ಮೂಲಕ  ಆದಷ್ಟು ಬೇಗ ರಾಮ ಮಂದಿರ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಂದಿರ ನಿರ್ಮಾಣದ ದಿನಾಂಕವನ್ನು ಘೋಷಣೆ ಮಾಡಬೇಕು , 2019 ರ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆಯನ್ನು  ತರಬೇಕೆಂದು  ಆಗ್ರಹಿಸಿದರು.

ಉದ್ದವ್ ಠಾಕ್ರೆ ಇದೇ ಮೊದಲ ಬಾರಿಗೆ ಅಯೋಧ್ಯೆಗೆ ಭೇಟಿ ನೀಡಿದ್ದು, ಶಿವಸೇನಾ ಸಂಸದ ಸಂಜಯ್ ರಾವತ್ ಸೇರಿದಂತೆ ಹಲವು ಮಂದಿ ಪಕ್ಷದ ಕಾರ್ಯಕರ್ತರು ಕೆಲ ದಿನಗಳಿಂದಲೂ ಉದ್ಧವ್ ಠಾಕ್ರೆ ಭೇಟಿ ಬಗ್ಗೆ ಪ್ರಚಾರ ನಡೆಸಿದ್ದರು.

ನಾಳೆ ಉದ್ಧವ್ ಠಾಕ್ರೆ ರಾಮಲಾಲಾ ದರ್ಶನ ಪಡೆಯಲಿದ್ದು, ಮಾಧ್ಯಮಗಳು ಹಾಗೂ ಸಾರ್ವಜನಿಕರಿಂದ ಸಂವಾದ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.