ದೇಶ

ಮನೋಜ್ ತಿವಾರಿ ನ್ಯಾಯಾಂಗ ನಿಂದನೆ ಕೇಸ್ ಕ್ಲೋಸ್ ಮಾಡಿದ ಸುಪ್ರೀಂ ಕೋರ್ಟ್

ಸಂಸದ ಹಾಗೂ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ..

ಮನೋಜ್ ತಿವಾರಿ ನ್ಯಾಯಾಂಗ ನಿಂದನೆ ಕೇಸ್ ಕ್ಲೋಸ್ ಮಾಡಿದ ಸುಪ್ರೀಂ ಕೋರ್ಟ್
ಮನೋಜ್ ತಿವಾರಿ
Published On :
ನವದೆಹಲಿ: ಸಂಸದ ಹಾಗೂ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. 
ಬಿಜೆಪಿ ಅಧ್ಯಕ್ಷ ಮನೋಜ್‌ ತಿವಾರಿ ವಿರುದ್ಧದ ದಿಲ್ಲಿ ಸೀಲಿಂಗ್‌ (ಬೀಗಮುದ್ರೆ ಮುರಿದ) ಕೇಸಿನಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. 
ಮನೋಜ್‌ ತಿವಾರಿ ಬೀಗ ಮುರಿದ ಪ್ರಕರಣವು ನ್ಯಾಯಾಂಗ ನಿಂದನೆಯಾಗುವುದಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಈಶಾನ್ಯ ದೆಹಲಿಯ ಸಂಸದನ  ವಿರುದ್ಧ ಬಿಜೆಪಿ ಕ್ರಮ ಜರುಗಿಸಬೇಕಾಗಿದೆ ಎಂದು ಹೇಳಿದೆ.
"ಪೌರಾಡಳಿತ ಸಂಸ್ಥೆಯು ನಿರ್ಬಂಧಿತ ಆವರಣಕ್ಕೆ ಹಾಕಿದ್ದ ಬೀಗವನ್ನು ಒಡೆದಿರುವ ತಿವಾರಿ ಕ್ರಮವನ್ನು ಒಪ್ಪುವಂತಿಲ್ಲ; ಆತನ ವರ್ತನೆ ನಮಗೆ ತೀವ್ರ ನೋವುಂಟುಮಾಡಿದೆ'' ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಹಾಗಿದ್ದರೂ ಕೋರ್ಟ್‌ ತಿವಾರಿ ವಿರುದ್ಧದ ಕೋರ್ಟ್‌ ನಿಂದನೆಯ ಕೇಸನ್ನು ತಾನು ಇಲ್ಲಿಗೆ ಕೊನೆಗೊಳಿಸುತ್ತಿರುವುದಾಗಿ ತಿಳಿಸಿದೆ,

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.