ದೇಶ

ಆಂಧ್ರ ಸಿಎಂ ನಾಯ್ಡುಗಿಂತಲೂ 3 ವರ್ಷದ ಮೊಮ್ಮಗನೇ ಸಿರಿವಂತ!

ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಸ್ತಿಗಿಂತಲೂ ಅವರ 3 ವರ್ಷದ ಮೊಮ್ಮಗನ ಆಸ್ತಿ 6 ಪಟ್ಟು ಹೆಚ್ಚಾಗಿರುವ ಮಾಹಿತಿ ಇದೀಗ ಬಹಿರಂಗಗೊಂಡಿದ್ದು, ತಾತನಿಗಿಂತಲೂ ಮೊಮ್ಮಗನೇ ಹೆಚ್ಚು ಸಿರಿವಂತ ಎಂಬ ಹೆಸರಿಗೆ ನಾಯ್ಡು ಮೊಮ್ಮಗ...

ಆಂಧ್ರ ಸಿಎಂ ನಾಯ್ಡುಗಿಂತಲೂ 3 ವರ್ಷದ ಮೊಮ್ಮಗನೇ ಸಿರಿವಂತ!
ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಅವರ ಮೊಮ್ಮಗ ದೇವಾಂಶ್
Published On :
ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಸ್ತಿಗಿಂತಲೂ ಅವರ 3 ವರ್ಷದ ಮೊಮ್ಮಗನ ಆಸ್ತಿ 6 ಪಟ್ಟು ಹೆಚ್ಚಾಗಿರುವ ಮಾಹಿತಿ ಇದೀಗ ಬಹಿರಂಗಗೊಂಡಿದ್ದು, ತಾತನಿಗಿಂತಲೂ ಮೊಮ್ಮಗನೇ ಹೆಚ್ಚು ಸಿರಿವಂತ ಎಂಬ ಹೆಸರಿಗೆ ನಾಯ್ಡು ಮೊಮ್ಮಗ ದೇವಾಂಶ ಪಾತ್ರನಾಗಿದ್ದಾನೆ. 
ನಾಯ್ಕು ಅವರ ಒಟ್ಟಾರೆ ಆಸ್ತಿ 2.99 ಕೋಟಿ ಯಾಗಿದ್ದಾರೆ, ಮೊಮ್ಮಗ ದೇವಾಂಶ್ ಬರೋಬ್ಬರಿ ರೂ.18.71 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾನೆ. 
ಚಂದ್ರಬಾಬು ನಾಯ್ಡು ಅವರ ಪುತ್ರ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾಗಿರುವ ನಾರಾ ಲೋಕೇಶ್ ಅವರು ಬುಧವಾರ ಸುದ್ದಿಗೋಷ್ಠಿ ನಡೆಸಿದ್ದು, ಸುದ್ದಿಗೋಷ್ಠಿಯಲ್ಲಿ ಕುಟುಂಬದ ಆಸ್ತಿಯನ್ನು ಘೋಷಣೆ ಮಾಡಿದ್ದಾರೆ. 
ಲೋಕೇಶ್ ಅವರ ಹೆಸರಿನಲ್ಲಿ ರೂ.21.40 ಕೋಟಿ ಆಸ್ತಿಯಿದ್ದು, ಕಳೆದ ವರ್ಷ ಆಸ್ತಿ ಮೌಲ್ಯ ರೂ.15.21 ಕೋಟಿಯಿತ್ತು ಎಂದು ಹೇಳಿದ್ದಾರೆ. 
ಇನ್ನು ಚಂದ್ರಬಾಬು ನಾಯ್ಡು ಅವರ ಆಸ್ತಿ ಕಳೆದ ವರ್ಷಕ್ಕಿಂತಲೂ ಪ್ರಸಕ್ತ ವರ್ಷ ರೂ.45 ಲಕ್ಷದಷ್ಟು ಹೆಚ್ಚಾಗಿದ್ದು, ಕಳೆದ ವರ್ಷವಿದ್ದ ಗೃಹ ಸಾಲ ರೂ.5.64ರಿಂದ 5.31ಕೋಟಿಗೆ ಇಳಿಕೆಯಾಗಿದೆ.
ಕಳೆದ ವರ್ಷ ಮುತ್ತಿನ ನಗರಿ ಹೈದರಾಬಾದ್'ನ ಜುಬ್ಲಿ ಹಿಲ್ಸ್ ನಲ್ಲಿ ನಿರ್ಮಾಣ ಮಾಡಲಾಗಿದ್ದ ನೂತನ ಮನೆಯ ಮೌಲ್ಯ ಕಳೆದ ವರ್ಷ ರೂ.7.75 ಕೋಟಿ ಇದ್ದರೆ, ಪ್ರಸಕ್ತ ವರ್ಷ ಇದರ ಮೌಲ್ಯ ರೂ.8.96ಕೋಟಿಗೆ ಏರಿಕೆಯಾಗಿದೆ. ಇನ್ನು ನಾಯ್ಡು ಅವರ ಪತ್ನಿ ಭುವನೇಶ್ವರಿಯವರು ಕುಟುಂಬದ ಶ್ರೀಮಂತೆ ಎನಿಸಿಕೊಂಡಿದ್ದು, ರೂ.31.01 ಕೋಟಿ ಆಸ್ತಿ ಅವರ ಹೆಸರಿನಲ್ಲಿದೆ. 
ಲೋಕೇಶ್ ಅವರ ಪತ್ನಿ ಬ್ರಾಹ್ಮಣಿಯವರ ಆಸ್ತಿ ರೂ.15.01 ಕೋಟಿಯಿಂದ ರೂ.7.72ಕೋಟಿಗೆ ಕುಸಿದಿದೆ. ಬ್ರಾಹ್ಮಣಿಯವರ ಸ್ಥಿರಾಸ್ತಿ ಮೌಲ್ಯ ರೂ.36.14 ಲಕ್ಷದಿಂದ ರೂ.5.66ಕೋಟಿಗೆ ಏರಿಕೆಯಾಗಿದೆ. ಇವರ ಪುತ್ರ ದೇವಾಂಶ್ ಆಸ್ತಿ ರೂ.18.71 ಕೋಟಿ ಆಗಿದ್ದು, ಕಳೆದ ವರ್ಷ ರೂ.11.54ರಷ್ಟಿತ್ತು. 
ಸತತ 8 ವರ್ಷಗಳಿಂದಲೂ ಸುದ್ದಿಗೋಷ್ಠಿ ನಡೆಸಿ ಕುಟುಂಬದ ಆಸ್ತಿ ಮೊಲ್ಯವನ್ನು ಘೋಷಣೆ ಮಾಡುತ್ತಿದ್ದೇನೆಂದು ಲೋಕೇಶ್ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.