ದೇಶ

ದೆಹಲಿಗೆ ನುಸುಳಿದ ಶಂಕಿತ ಉಗ್ರರ ಭಾವಚಿತ್ರ ಬಿಡುಗಡೆ ಮಾಡಿದ ಪೊಲೀಸರು!

ಪಂಜಾಬ್ ಗಡಿಯಿಂದ ಭಾರತದೊಳಗೆ ನುಸುಳಿರುವ ಇಬ್ಬರು ನಟೋರಿಯಸ್ ಉಗ್ರರ ಭಾವಚಿತ್ರವನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದು, ದೆಹಲಿಯಾದ್ಯಂತ ಹೈಅಲರ್ಟ್ ಘೋಷಣೆ ಮಾಡಿದ್ದಾರೆ.

ದೆಹಲಿಗೆ ನುಸುಳಿದ ಶಂಕಿತ ಉಗ್ರರ ಭಾವಚಿತ್ರ ಬಿಡುಗಡೆ ಮಾಡಿದ ಪೊಲೀಸರು!
ಪೊಲೀಸರು ಬಿಡುಗಡೆ ಮಾಡಿರುವ ಉಗ್ರರ ಭಾವಚಿತ್ರ
Published On :
ನವದೆಹಲಿ: ಪಂಜಾಬ್ ಗಡಿಯಿಂದ ಭಾರತದೊಳಗೆ ನುಸುಳಿರುವ ಇಬ್ಬರು ನಟೋರಿಯಸ್ ಉಗ್ರರ ಭಾವಚಿತ್ರವನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದು, ದೆಹಲಿಯಾದ್ಯಂತ ಹೈಅಲರ್ಟ್ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ವರಿಷ್ಠಾಧಿಕಾರಿಗಳು, ಪಂಜಾಬ್ ಪ್ರಾಂತ್ಯದಿಂದ ಇಬ್ಬರು ಉಗ್ರರು ನುಸುಳಿದ್ದಾರೆ. ಪ್ರಸ್ತುತ ರಾಷ್ಟ್ರರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದು, ಈಗಾಗಲೇ ರಾಜಧಾನಿ ತಲುಪಿರುವ ಶಂಕೆ ಇದೆ. ಹೀಗಾಗಿ ಸಾರ್ವಜನಿಕರ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.
ಅಂತೆಯೇ ಯಾರ ಬಗ್ಗೆಯಾದರೂ ಶಂಕೆ ವ್ಯಕ್ತವಾದರೆ ಪಹರ್ ಗಂಜ್ ಪೊಲೀಸ್ ಠಾಣೆಯ 011-23520787 ಮತ್ತು 011-2352474 ಈ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಪಂಜಾಬ್ ಪೊಲೀಸರು ದೆಹಲಿಯಿಂದ ಸುಮಾರು 360 ಕಿ.ಮೀ ದೂರದಲ್ಲಿರುವ ಪಂಜಾಬ್ ಫಿರೋಜ್ ಪುರ ಗಡಿ ಮೂಲಕ ಇಬ್ಬರು ಉಗ್ರರು ಭಾರತದೊಳಗೆ ನುಸುಳಿದ್ದಾರೆ ಎಂದು ಹೇಳಿದ್ದರು. ನುಸುಳಿರುವ ಇಬ್ಬರೂ ಉಗ್ರರು ಕುಖ್ಯಾತ ಜೈಷ್ ಇ ಮೊಹಮದ್ ಉಗ್ರ ಸಂಘಟನೆಗೆ ಸೇರಿದ ಉಗ್ರರು ಎಂದು ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.