ದೇಶ

ಬಿಹಾರ ವಸತಿ ನಿಲಯ ಲೈಂಗಿಕ ಹಗರಣ: ನಾಪತ್ತೆಯಾಗಿದ್ದ ಮಾಜಿ ಸಚಿವೆ ಮಂಜು ವರ್ಮಾ ಕೋರ್ಟ್ ಗೆ ಶರಣು

ಬಿಹಾರದ ಮುಜಾಫರ್‍ ವಸತಿ ನಿಲಯದಲ್ಲಿ ನಡೆದ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮಾಜಿ ಸಚಿವೆ ಮಂಜು ಶರ್ಮ ಮಂಗಳವಾರ ..

ಬಿಹಾರ ವಸತಿ ನಿಲಯ ಲೈಂಗಿಕ ಹಗರಣ: ನಾಪತ್ತೆಯಾಗಿದ್ದ  ಮಾಜಿ ಸಚಿವೆ ಮಂಜು ವರ್ಮಾ ಕೋರ್ಟ್ ಗೆ ಶರಣು
ಮಂಜು ವರ್ಮಾ
Published On :
ಪಾಟ್ನಾ:  ಬಿಹಾರದ ಮುಜಾಫರ್‍ ವಸತಿ ನಿಲಯದಲ್ಲಿ ನಡೆದ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮಾಜಿ ಸಚಿವೆ ಮಂಜು ಶರ್ಮ ಮಂಗಳವಾರ ಬೇಗುಸರಾಯ್ ಕೋರ್ಟ್ ನಲ್ಲಿ ಶರಣಾಗಿದ್ದಾರೆ.
ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದ, ಮಂಜು ವರ್ಮಾ ಅವರನ್ನು  ಶಸ್ತ್ರಾಸ್ತ್ರ ಕಾಯಿದೆಯಡಿ ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದರು. ಮಂಜು ವರ್ಮಾ  ಬಂಧಿಸಲು ಪೊಲೀಸರು ವಿಫಲವಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್,.ಬಿಹಾಪ ಪೊಲೀಸರಿಗೆ ತಪರಾಕಿ ಹಾಕಿತ್ತು.
ಆಟೋ ರಿಕ್ಷಾದಲ್ಲಿ  ಬಂದ ಮಂಜು ವರ್ಮಾ ಕೋರ್ಟ್ ಹಾಲ್ ಪ್ರವೇಶಿಸುತ್ತಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದರು, ನಂತರ ಅವರ ಮುಖದ ಮೇಲೆ ನೀರು ಚುಮುಕಿಸಿದಾಗ ಪ್ರಜ್ಞೆ ಬಂದಿತು.
ಆಕೆಯನ್ನು ಬಂಧಿಸಲು ವಿಫಲರಾದ ಪೊಲೀಸರ ಅಸಮರ್ಥತೆಯ ಬಗ್ಗೆ ನ್ಯಾಯಾಲಯ ಆಘಾತ ವ್ಯಕ್ತ ಪಡಿಸಿತ್ತು. ನವೆಂಬರ್ 27ರೊಳಗೆ ಆಕೆಯನ್ನು ಬಂಧಿಸದಿದ್ದರೇ ಬಿಹಾರ ಡಿಜಿಪಿ ಕೋರ್ಟ್ ಹಾಜರಾಗಬೆಕೆಂದು ಸೂಚಿಸಿತ್ತು.
ಆದರೆ ಮಂಜುವರ್ಮಾ ಮಂಗಳವಾರ ನ್ಯಾಯಾಲಯಕ್ಕೆ ಶರಣಾಗಿರುವುದು ಬಿಹಾರ ಪೋಲೀಸರಿಗೆ ಸ್ವಲ್ಪ ನಿರಾಳ ತಂದಿದೆ..

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.