ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲವೆಂದು ಸಂಬಳ ತಡೆಹಿಡಿಯುವಂತಿಲ್ಲ: ಬಾಂಬೆ ಹೈಕೋರ್ಟ್
ಓರ್ವ ವ್ಯಕ್ತಿಯ ಸಂಬಳದ ಕಾತೆಗೆ ಆಧಾರ್ ಸಂಪರ್ಕ ಮಾಡಿಲ್ಲ ಎಂಬ ಕಾರಣಕ್ಕೆ ಆತನ ಸಂಬಳವನ್ನು ತಡೆಹಿಡಿದಿಡುವುದು ಎಷ್ಟು ಸರಿ ಎಂದು ಬಾಂಬೆ ಹೈಕೋರ್ಟ್ ಕೇಂದ್ರಕ್ಕೆ ಪ್ರಶ್ನೆ ಮಾಡಿದೆ.

Published On :
ಮುಂಬೈ: ಓರ್ವ ವ್ಯಕ್ತಿಯ ಸಂಬಳದ ಕಾತೆಗೆ ಆಧಾರ್ ಸಂಪರ್ಕ ಮಾಡಿಲ್ಲ ಎಂಬ ಕಾರಣಕ್ಕೆ ಆತನ ಸಂಬಳವನ್ನು ತಡೆಹಿಡಿದಿಡುವುದು ಎಷ್ಟು ಸರಿ ಎಂದು ಬಾಂಬೆ ಹೈಕೋರ್ಟ್ ಕೇಂದ್ರಕ್ಕೆ ಪ್ರಶ್ನೆ ಮಾಡಿದೆ.
ಪ್ರಕರಣ ಒಂದರಲ್ಲಿ ಪೋರ್ಟ್ ಟ್ರಸ್ಟ್ ಉಯೋಗಿಯೊಬ್ಬರು ತಮ್ಮ ಸಂಬಳದ ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಲ್ಲದ ಕಾರಣ ಅವರಿಗೆ 2016ರಿಂದಲೂ ವೇತನ ಪಾವತಿ ಮಾಡಿಲ್ಲ. ಈ ಕುರಿತಂತೆ ಉದ್ಯೋಗಿಯು ಕೋರ್ಟ್ ಮೊರೆ ಹೋಗಿದ್ದು ಇದೀಗ ನ್ಯಾಯಾಲಯ ಕಳೆದ ಸಪ್ಟೆಂಅರ್ ನಲ್ಲಿ ಆಧಾರ್ ಕುರಿತಂತೆ ಸುಪ್ರೀಂ ತೀರ್ಪನ್ನು ಉಲ್ಲೇಖ್ಝಿಸಿದ ನ್ಯಾಯಾಲಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ಎಸ್.ಕೆ. ಶಿಂಧೆ ಅವರನ್ನೊಳಗೊಂಡ ನ್ಯಾಯಪೀಠ ಈ ಸಂಬಂಧ ವಿಚಾರಣೆ ನಡೆಸಿದೆ. ಮುಂಬೈ ಪೋರ್ಟ್ ಟ್ರಸ್ಟ್ ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಪುರಲೆ ಈ ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಅವರು ಅವರ ಬ್ಯಾಂಕ್ ಖಾತೆಯನ್ನು ತನ್ನ ಆಧಾರ್ ಕಾರ್ಡ್ ನೊಡನೆ ಸಂಪರ್ಕಿಸಲು ವಿಫಲವಾದ ಬಳಿಕ ವೇತನವನ್ನುಯ್ ಪಡೆಯಲಿಲ್ಲ ಎಂದು ಅವರು ಅರ್ಜಿಯಲ್ಲಿ ವಿವರಿಸಿದ್ದಾರೆ.
ಡಿಸೆಂಬರ್ 2015 ರಲ್ಲಿ ಕೇಂದ್ರೀಯ ಸಚಿವಾಲಯ ಪುರಲೆ ಅವರಿಗೆ ಈ ಸಂಬಂಧ ಸೂಚನೆ ನೀಡ್ದ್ದು ಅವರು ಇದನ್ನು ಪ್ರಶ್ನಿಸಿದ್ದರು.ಅವರು ಆಧಾರ್ ನೊಡನೆ ಬ್ಯಾಂಕ್ ಖಾತೆ ಸಂಪರ್ಕಿಸುವುದರಿಂಡ ಗೌಪ್ಯತೆಯ ಹಕ್ಕಿಗೆ ಧಕ್ಕೆಯಾಗುತ್ತದೆ ಎಂದು ವಾದಿಸಿದ್ದರು.ಈ ಸಂಬಂಧ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಕಳೆದ ಸೆಪ್ಟೆಂಬರ್ 26ರಂದು ಸುಪ್ರೀಂ ಕೋರ್ಟ್ ಆಧಾರ್ ಸಂಬಂಧಿಸಿ ಮಹತ್ವದ ತೀರ್ಪು ಪ್ರಕಟಿಸಿ ಕೇಂದ್ರದ ಬಯೋಮೆಟ್ರಿಕ್ ಯೋಜನೆಯಾದ ಆಧಾರ್ ಮಾನ್ಯತೆಯನ್ನು ಸೀಮಿತ ವಲಯಗಳಿಗೆ ಮಾತ್ರವೇ ಕಡ್ಡಾಯಗೊಳಿಸಿದೆ. ಇದೇ ವೇಳೆ ಬ್ಯಾಂಕ್ ಖಾತೆ, ಶಾಲಾ ಪ್ರವೇಶಾತಿ ಹಾಗೂ ಮೊಬೈಲ್ ಸಿಮ್ ಖರೀದಿಗಾಗಿ ಆಧಾರ್ ಕಡ್ಡಾಯವಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿತ್ತು.
ಸರ್ವೋಚ್ಚ ನ್ಯಾಯಾಲಯದ ಈ ತೀರ್ಪಿನ ಆಧಾರದಲ್ಲಿ ಬಾಂಬೆ ಹೈಕೋರ್ಟ್ ಅರ್ಜಿದಾರರಿಗೆ ಬಾಕಿ ಪಾವತಿಸಲು ಸರ್ಕಾರಕ್ಕೆ ಸೂಚನೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


