ದೇಶ

ಕನ್ನಯ್ಯ ಕುಮಾರ್, ಜಿಗ್ನೆಶ್ ಮೇವಾನಿ ಮೇಲೆ ಮಸಿ ಎರಚಿದ ವ್ಯಕ್ತಿ

ಗುಜರಾತ್ ಶಾಸಕ ಜಿಗ್ನೆಶ್ ಮೇವಾನಿ ಹಾಗೂ ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕ ಕನ್ನಯ್ಯ ಕುಮಾರ್ ಮೇಲೆ...

ಕನ್ನಯ್ಯ ಕುಮಾರ್, ಜಿಗ್ನೆಶ್ ಮೇವಾನಿ ಮೇಲೆ ಮಸಿ ಎರಚಿದ ವ್ಯಕ್ತಿ
ಜಿಗ್ನೆಶ್ ಮೇವಾನಿ
Published On :
ಗ್ವಾಲಿಯರ್: ಗುಜರಾತ್ ಶಾಸಕ ಜಿಗ್ನೆಶ್ ಮೇವಾನಿ ಹಾಗೂ ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕ ಕನ್ನಯ್ಯ ಕುಮಾರ್ ಮೇಲೆ ಬಲ ಪಂಥೀಯ ಸಂಘಟನೆಯ ವ್ಯಕ್ತಿಯೊಬ್ಬ ಮಸಿ ಎರಚಿತ ಘಟನೆ ಸೋಮವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಗ್ನೆಶ್ ಮೇವಾನಿ ಮತ್ತು ಕನ್ನಯ್ಯ ಕುಮಾರ್ ಅವರು ಸಂವಿಧಾನ ಬಚಾವೋ ಆಂದೋಲನದ ಭಾಗವಾಗಿ ಇಂದು ವಾಣಿಜ್ಯ ಮಂಡಳಿ ಭವನದಲ್ಲಿ ಸೆಮಿನಾರ್ ಉದ್ದೇಶಿಸಿ ಮಾತನಾಡಲು ಆಗಮಿಸಿದ್ದರು.
ಹಿಂದು ಸೇನಾ ಸಂಘಟನೆಯ ಮುಕೇಶ್ ಪಾಲ್ ಎಂಬ ವ್ಯಕ್ತಿ ಈ ಇಬ್ಬರು ನಾಯಕರ ಮೇಲೆ ಮಸಿ ಎರಚಿದ್ದು, ಅದು ಅವರ ಶರ್ಟ್ ಮೇಲೆ ಬಿದ್ದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾದಿಕಾರಿ ಎಸ್ ಎಸ್ ಥೋಮರ್ ಅವರು ತಿಳಿಸಿದ್ದಾರೆ.
ಜಿಗ್ನೆಶ್ ಮೇವಾನಿ ಮತ್ತು ಕನ್ನಯ್ಯ ಕುಮಾರ್ ಅವರು ನಿಗದಿಯಂತೆ ಸೆಮಿನಾರ್ ಉದ್ದೇಶಿಸಿ ಮಾತನಾಡಿದ್ದು, ಅದನ್ನು ವಿಡಿಯೋ ಮಾಡಲಾಗಿದೆ ಎಂದು ಥೋಮರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.